ಭಾರತ, ಜುಲೈ 10 -- ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಪಂಚದಾದ್ಯಂತ ಹಲವರನ್ನು ಬಾಧಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹೃದಯ ಸಂಬಂಧಿ ಕಾಯಿಲೆಗಳು (CVDs) ಪ್ರಪಂಚದಾದ್ಯಂತದ ಸುಮಾರು ಶೇ 32ರಷ್ಟು ಜನರ ಸಾವಿಗೆ ಕಾರಣವಾಗಿವೆ. 2019 ರಲ್ಲಿ, ಸುಮಾರು 17.9 ಮಿಲಿಯನ್ ಜನರು ಹೃದಯ ಸಂಬಂಧಿ ಸಮಸ್ಯೆಗಳಿಂದ ಸಾವನ್ನಪ್ಪಿದರು. ಅದರಲ್ಲಿ 85 ಪ್ರತಿಶತ ಜನರು ಹೃದಯಾಘಾತ ಅಥವಾ ಪಾರ್ಶ್ವವಾಯುಗಳಿಂದ ಸಾವನ್ನಪ್ಪಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗಳು ಏಕೆ ಸಂಭವಿಸುತ್ತವೆ? ಹೃದಯಾಘಾತ ಮತ್ತು ಪಾರ್ಶ್ವವಾಯುಗಳ ಲಕ್ಷಣಗಳು ಯಾವುವು? ಈ ಅಪಾಯವನ್ನು ನಾವು ಹೇಗೆ ಕಡಿಮೆ ಮಾಡಬಹುದು? ಎಂಬಿತ್ಯಾದಿ ವಿವರ ಇಲ್ಲಿದೆ.

ಹೃದಯಾಘಾತ ಮತ್ತು ಪಾರ್ಶ್ವವಾಯು ಸಾಮಾನ್ಯವಾಗಿ ಹೃದಯ ಅಥವಾ ಮೆದುಳಿಗೆ ರಕ್ತ ಪೂರೈಕೆಯಲ್ಲಿನ ಅಡಚಣೆಗಳಿಂದ ಉಂಟಾಗುತ್ತದೆ. ಇದಕ್ಕೆ ಮುಖ್ಯ ಕಾರಣ ರಕ್ತನಾಳಗಳ ಒಳ ಗೋಡೆಗಳ ಮೇಲೆ ಕೊಬ್ಬು ಶೇಖರಣೆಯಾಗುವುದು. ಕೆಲವೊಮ್ಮೆ ಪಾರ್ಶ್ವವಾಯು ಛಿದ್ರಗೊಂಡ ರಕ್ತನಾಳ ಅಥವಾ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಲ...