ಭಾರತ, ಮಾರ್ಚ್ 8 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 7ರ ಸಂಚಿಕೆಯಲ್ಲಿ ಯಾವುದೋ ಫೈಲ್ ನೋಡುತ್ತಿರುವ ವೀರೇಂದ್ರ ಒಂದು ವಾರದಲ್ಲಿ ಆಗಬೇಕಿದ್ದ ಕೆಲಸವೆಲ್ಲಾ ಒಂದೇ ದಿನದಲ್ಲಿ ಹೇಗೆ ಮುಗಿಯಿತು ಎಂದು ಅಚ್ಚರಿಯಿಂದ ಕೇಳುತ್ತಾರೆ. ಆಗ ಸುರೇಂದ್ರ 'ಅಣ್ಣಾ ಸುಬ್ಬು ನಿನ್ನೆ ಬೇಗ ಹೋಗಬೇಕು ಎಂದು ಕೇಳಿದ್ದ, ಕೆಲಸ ಇದೆ ಮುಗಿಸಿ ಹೋಗು ಎಂದಿದ್ದಕ್ಕೆ ರಾತ್ರಿಯೆಲ್ಲಾ ಕೂತು ಕೆಲಸ ಮಾಡಿ ಮುಗಿಸಿ ಹೋಗಿದ್ದಾನೆ' ಎನ್ನುತ್ತಾನೆ. ಆಗ ವೀರೇಂದ್ರ 'ಸುರೇಂದ್ರ ಈಗ ಆಗಿದ್ದು ಆಗಿ ಹೋಯ್ತು, ಇನ್ನು ಮುಂದೆ ಹೀಗೆ ಮಾಡಬೇಡ. ವಾರದಲ್ಲಿ ಆಗುವ ಕೆಲಸವನ್ನು ಒಂದೇ ದಿನ ಮಾಡುವುದು ಬೇಡ' ಎಂದು ಹೇಳುತ್ತಾನೆ. ಅಣ್ಣಾ ಸುಬ್ಬು ಪರವಾಗಿ ಮಾತನಾಡುತ್ತಿದ್ದಾನೆ ಎಂದು ಸುರೇಂದ್ರನಿಗೆ ಕೋಪ ಬರುತ್ತದೆ. 'ಇದೇನಣ್ಣಾ ಹೀಗೆ ಮಾತಾಡ್ತೀಯಾ, ಈಗಲೂ ಆ ಸುಬ್ಬು ಮೇಲೆ ಕನಿಕರ, ಒಳ್ಳೆ ಭಾವನೆ ಇದ್ಯಾ' ಎಂದು ಕೇಳುತ್ತಾನೆ. ಅದಕ್ಕೆ ವೀರೇಂದ್ರ 'ನನಗೆ ನಿನಗಿಂತಲೂ ಹೆಚ್ಚು ಅವನು ಮೇಲೆ ಕೋಪ ಇದೆ. ಆದರೆ ಇದು ಸರ್ಕಾರಿ ಕೆಲಸ. ಗಡಿಬಿಡಿಯಲ್ಲಿ ಮಾಡಿ ಏನಾದ್ರೂ ಹೆಚ...