ಭಾರತ, ಮೇ 27 -- ಕಿಚ್ಚ ಸುದೀಪ್‌ ಜತೆಗೆ ಮ್ಯಾಕ್ಸ್‌ ಸಿನಿಮಾದಲ್ಲಿ ನಟಿಸಿದ್ದ, ಪಾರು, ಮಂಗಳ ಗೌರಿ ಮದುವೆ, ವಧು ಹಾಗೂ ಇನ್ನೂ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ ನಟ ಶ್ರೀಧರ್ ನಾಯ್ಕ್‌ ಅವರು ಸೋಮವಾರ ನಿಧನರಾಗಿದ್ದಾರೆ. ಕಳೆದ ತಿಂಗಳು ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುದ್ದಿ ವೈರಲ್‌ ಆಗಿತ್ತು. ಇವರು ಇನ್‌ಫೆಕ್ಷನ್‌ನಿಂದ ಗುರುತು ಸಿಗದಂತೆ ಕೃಶವಾಗಿದ್ದರು. ಪ್ರತಿಭಾವಂತ ನಟನ ಈ ಸ್ಥಿತಿ ನೋಡಿ ಎಲ್ಲರೂ ಮರುಗಿದ್ದರು. ಇದೀಗ ಇವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಇವರ ಅಪ್ತರು, ಸಹ ಕಲಾವಿದರು ನಿಧನ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇವರು ಮಂಗಳ ಗೌರಿ, ಪಾರು, ಮನೆಯೇ ಮಂತ್ರಾಲಯ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದಲ್ಲಿಯೂ ನಟಿಸಿದ್ದರು. ರಾಜಾ ಮಾರ್ತಾಂಡ, ಈಶ ಮಹೇಶ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತಮಿಳು ಸಿನಿಮಾಗ...