ಭಾರತ, ಮೇ 27 -- ಕಿಚ್ಚ ಸುದೀಪ್‌ ಜತೆಗೆ ಮ್ಯಾಕ್ಸ್‌ ಸಿನಿಮಾದಲ್ಲಿ ನಟಿಸಿದ್ದ, ಪಾರು, ಮಂಗಳ ಗೌರಿ ಮದುವೆ, ವಧು ಹಾಗೂ ಇನ್ನೂ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ ನಟ ಶ್ರೀಧರ್ ನಾಯಕ್ ಅವರು ಸೋಮವಾರ ನಿಧನರಾಗಿದ್ದಾರೆ. ಕಳೆದ ತಿಂಗಳು ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುದ್ದಿ ವೈರಲ್‌ ಆಗಿತ್ತು. ಇವರು ಇನ್‌ಫೆಕ್ಷನ್‌ನಿಂದ ಗುರುತು ಸಿಗದಂತೆ ಕೃಶವಾಗಿದ್ದರು. ಪ್ರತಿಭಾವಂತ ನಟನ ಈ ಸ್ಥಿತಿ ನೋಡಿ ಎಲ್ಲರೂ ಮರುಗಿದ್ದರು. ಇದೀಗ ಇವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಇವರ ಅಪ್ತರು, ಸಹ ಕಲಾವಿದರು ನಿಧನ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Published by HT Digital Content Services with permission from HT Kannada....