ಭಾರತ, ಮಾರ್ಚ್ 27 -- ಪಾಕಿಸ್ತಾನದಲ್ಲಿ ಮತ್ತೊಂದು ಸೇನಾದಂಗೆ ಏರ್ಪಡುವಂತೆ ಕಾಣುತ್ತಿದೆ. ಸೇನಾ ಮುಖ್ಯಸ್ಥ ಆಸಿಮ್ ಮುನೀರ್‌ ಅವರು ಶೆಹಬಾಜ್ ಷರೀಫ್ ಸರ್ಕಾರ ಪತನಗೊಳಿಸಿ, ಅಧಿಕಾರ ಚುಕ್ಕಾಣಿ ಹಿಡಿಯುವ ಸಾದ್ಯತೆ ಕಾಣುತ್ತಿದೆ. ಈ ಸನ್ನಿವೇಶವನ್ನು ನಿಮಿತ್ತವಾಗಿಟ್ಟುಕೊಂಡು ಜಗತ್ತಿನಲ್ಲಿ ಸರ್ಕಾರಕ್ಕಿಂತ ಸೇನೆಯೇ ಬಲಿಷ್ಠವಾಗಿರುವ ದೇಶಗಳು ಯಾವುವು ಎಂಬುದನ್ನು ಗಮನಿಸೋಣ.

ಪಾಕಿಸ್ತಾನದಲ್ಲಿ ಸೇನಾದಂಗೆ ಎಂಬುದು ಸಾಮಾನ್ಯ ಪದವಾಗಿದೆ. ಇಲ್ಲಿ ಮೊದಲ ಬಾರಿಗೆ, 1958ರಲ್ಲಿ ಜನರಲ್ ಅಯೂಬ್ ಖಾನ್ ಸೇನಾದಂಗೆ ನಡೆಸಿ ಆಡಳಿತ ಸೂತ್ರ ಹಿಡಿದರು. ಇದು ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕು ಎಂಟು ವರ್ಷಗಳ ಬಳಿಕ ನಡೆದ ಘಟನೆ. ಇದಾದ ಬಳಿಕ ಜನರಲ್ ಜಿಯಾ ಉಲ್ ಹಕ್ ಮತ್ತು ಪರ್ವೇಜ್ ಮುಷರಫ್ ಕೂಡ ಸೇನಾದಂಗೆ ನಡೆಸಿ ಆಡಳಿತ ಸೂತ್ರ ಹಿಡಿದರು. ಇಲ್ಲಿ, ರಾಜಕೀಯ ಮತ್ತು ಚುನಾವಣೆಗಳಲ್ಲಿ ಸೈನ್ಯದ ಹಸ್ತಕ್ಷೇಪವು ತುಂಬಾ ಇದೆ, ಇದರಿಂದಾಗಿ ಉಂಟಾಗುವ ರಾಜಕೀಯ ಅಸ್ಥಿರತೆಯ ಲಾಭವನ್ನು ಸೇನೆ, ಸೇನಾಧಿಕಾರಿಗಳು ಬಳಸಿಕೊಳ್ಳುತ್ತಾರೆ.

ಬಾಂಗ್ಲಾದೇಶದಲ್ಲ...