ಭಾರತ, ಏಪ್ರಿಲ್ 5 -- ಪಾಕಿಸ್ತಾನ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ. ಮೌಂಟ್ ಮೌಂಗನುಯಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮತ್ತೊಮ್ಮೆ ಅಬ್ಬರಿಸಿದ ಕಿವೀಸ್‌ ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಇದರೊಂದಿಗೆ ಕಿವೀಸ್‌ ಪ್ರವಾಸವನ್ನು ಪಾಕಿಸ್ತಾನವು ಸೋಲಿನ ಕಹಿಯೊಂದಿಗೆ ಮುಗಿಸಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದ್ದ ಪಾಕ್‌, ಇದೀಗ ಏಕದಿನ ಸರಣಿಯಲ್ಲಿ ವೈಟ್‌ ವಾಶ್‌ ಆಗಿದೆ.

ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಿವೀಸ್‌ 264 ರನ್‌ ಗಳಿಸಿತು. ಮೈದಾನ ಒದ್ದೆಯಾಗಿದ್ದ ಕಾರಣದಿಂದ ಪಂದ್ಯವನ್ನು 42 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಕಿವೀಸ್‌ ಬೃಹತ್‌ ಮೊತ್ತಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಪಾಕಿಸ್ತಾನ ಕೇವಲ 221 ರನ್‌ ಗಳಿಸಿತು. ಹೀಗಾಗಿ 43 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.

ಕಿವೀಸ್‌ ಪರ ಆರಂಭ...