ಭಾರತ, ಮಾರ್ಚ್ 3 -- ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅವರ ದೇಹ ತೂಕದ ಕುರಿತು ವಿವಾದಾತ್ಮಕ ಪೋಸ್ಟ್ ಹಂಚಿಕೊಂಡು ಅಳಿಸಿದ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರು ತನ್ನ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದರ ನಡುವೆಯೂ ಆಕ್ರೋಶ ಮತ್ತು ಟ್ರೋಲ್ ನಿಂತಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆದ್ದಿದ್ದಕ್ಕೆ ಈ ಹೇಳಿಕೆ ಕೊಟ್ಟಿದ್ದಾರೆ ಎಂದು ಹೊಸ ಚರ್ಚೆ ಹುಟ್ಟಿಕೊಂಡಿದೆ. ಕೈ ನಾಯಕಿ ಹೇಳಿಕೆಗೆ ಬಿಸಿಸಿಐ ಕೂಡ ಪ್ರತಿಕ್ರಿಯಿಸಿದೆ.

ವಿವಾದದ ಬಳಿಕ ಎಎನ್​ಐ ಜೊತೆ ಮಾತನಾಡಿರುವ ಶಮಾ ಮೊಹಮ್ಮದ್ ಅವರು, 'ಇದು ಕ್ರೀಡಾಪಟುವಿನ ಫಿಟ್ನೆಸ್ ಬಗ್ಗೆ ಸಾಮಾನ್ಯ ಟ್ವೀಟ್ ಆಗಿತ್ತಷ್ಟೆ. ಅವರ ದೇಹವನ್ನು ಶೇಮ್ ಮಾಡುವ ಉದ್ದೇಶವಲ್ಲ. ಒಬ್ಬ ಕ್ರೀಡಾಪಟು ಫಿಟ್ ಆಗಿರಬೇಕು ಎಂದು ಯಾವಾಗಲೂ ನಂಬಿದ್ದೆ. ದಪ್ಪ ಇದ್ದಾರೆಂದು ನನಗೆ ಅನಿಸಿತು. ಇದೇ ಕಾರಣಕ್ಕೆ ನಾನು ಆ ಕುರಿತು ಟ್ವೀಟ್ ಮಾಡಿದ್ದೇನೆ. ಆದರೆ, ಯಾವುದೇ ಕಾರಣವಿಲ್ಲದೆ ನನ್ನ ಮೇಲೆ ದಾಳಿ ಮಾಡಲಾಗಿದೆ. ನನಗೆ ಹಕ್ಕಿದೆ. ಹೇಳುವುದರಲ...