Bangalore, ಫೆಬ್ರವರಿ 22 -- ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಲಯಕ್ಕೆ ಮರಳುವ ಮೂಲಕ ಸಮಾಧಾನ ತರಿಸಿದ್ದ ಭಾರತ ತಂಡದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಮತ್ತೆ ವೈಫಲ್ಯದ ಹಾದಿಗೆ ಮರಳಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಟನ್​ಗಟ್ಟಲೆ ರನ್ ಗಳಿಸುವ ಕೊಹ್ಲಿ, ಆರಂಭಿಕ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದು ಅಚ್ಚರಿ ಮೂಡಿಸಿದೆ. 38 ಎಸೆತಗಳಲ್ಲಿ 1 ಬೌಂಡರಿ ಸಹಿತ ಗಳಿಸಿದ್ದು 22 ರನ್ ಮಾತ್ರ. ಮತ್ತೊಮ್ಮೆ ಲೆಗ್​​ಸ್ಪಿನ್​ಗೆ ವಿಕೆಟ್ ಒಪ್ಪಿಸುವ ಮೂಲಕ ತನ್ನ ವೀಕ್ನೆಸ್ ಅನ್ನು ಜಗಜ್ಜಾಹೀರು ಮಾಡಿದ್ದಾರೆ.

ಲೆಗ್​ ಸ್ಪಿನ್ನರ್​ಗೆ ಪದೆಪದೇ ಔಟಾಗುತ್ತಿರುವ ವಿರಾಟ್ ಕೊಹ್ಲಿಗೆ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ದಿಗ್ಗಜ ಆಟಗಾರ ಹರ್ಭಜನ್ ಸಿಂಗ್ ಉಪಯುಕ್ತ ಸಲಹೆಯನ್ನು ನೀಡಿದ್ದಾರೆ. ವೀಕ್ನೆಸ್ ಅರಿತಿರುವ ಎದುರಾಳಿ ತಂಡಗಳು ಕೊಹ್ಲಿ ಕ್ರೀಸ್​ಗೆ ಬರುತ್ತಿದ್ದಂತೆ ಲೆಗ್​ ಸ್ಪಿನ್ನರ್​​ಗೆ ಚೆಂಡು ನೀಡುತ್ತಿರುವುದನ್ನು ಕಾಣಬಹುದು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ, ಸ್ಪಿನ್ನರ್...