ಭಾರತ, ಮಾರ್ಚ್ 13 -- Pakistan Train Haijack: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಜಾಫರ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ದಾಳಿ ನಡೆಸಿದ್ದ ಉಗ್ರರು ಒಟ್ಟು 21 ಮಂದಿ ಪ್ರಯಾಣಿಕರನ್ನು ಹಾಗೂ ಅರೆಸೇನಾ ಪಡೆಯ ನಾಲ್ಕು ಮಂದಿಯನ್ನು ಹತ್ಯೆ ಮಾಡಿದ್ದಾರೆ. ಇದರ ಬೆನ್ನಿಗೆ ಅಪಹರಣಕ್ಕೆ ಒಳಗಾದ ರೈಲಿನಲ್ಲಿದ್ದ ಪ್ರಯಾಣಿಕರ ರಕ್ಷಣಾ ಕಾರ್ಯ ನಡೆಸಿದ ಪಾಕಿಸ್ತಾನದ ಭದ್ರತಾ ಪಡೆಗಳು 33 ಬಂಡುಕೋರರನ್ನು ಹತ್ಯೆ ಮಾಡಿ ಒತ್ತೆಯಾಳುಗಳಾಗಿದ್ದ ಉಳಿದೆಲ್ಲ ಪ್ರಯಾಣಿಕರನ್ನು ರಕ್ಷಿಸಿದೆ. ಬಲೂಚಿಸ್ತಾನ ಹೋರಾಟಗಾರರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಎಲ್‌ಎ ತಂಡ ರೈಲನ್ನು ಅಪಹರಿಸಿತ್ತು.

ಪಾಕಿಸ್ತಾನ ರೈಲು ಅಪಹರಣ ಪ್ರಕರಣ ಕೊನೆಗೂ ಮುಕ್ತಾಯ ಕಂಡಿದೆ. ಉಗ್ರರ ಒತ್ತೆಸೆರಯಲ್ಲಿದ್ದ ರೈಲು ಪ್ರಯಾಣಿಕರನ್ನು ಬಂಧಮುಕ್ತಗೊಳಿಸಲಾಗಿದೆ. ಪಾಕಿಸ್ತಾನದ ವಿಶೇಷ ಭದ್ರತಾ ಪಡೆ ತಂಡ ರೈಲಿಗೆ ನುಗ್ಗಿದಾಗ, ಅದರೊಳಗಿದ್ದ ಉಗ್ರರು ಆತ್ಮಹತ್ಯಾ ಜಾಕೆಟ್ ಧರಿಸಿ ಪ್ರಯಾಣಿಕರನ್ನು ಬೆದರಿಸುತ್ತಿದ್ದರು. ಅಂತಿಮವಾಗಿ ಯೋಜಿತ ಕಾರ್ಯಾಚರ...