ಭಾರತ, ಮೇ 9 -- ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧೋನ್ಮಾದ ಹೆಚ್ಚಾಗಿದೆ. ದಾಳಿ-ಪ್ರತಿದಾಳಿ ಜೋರಾಗಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡೆಸಿದ ಕ್ಷಿಪಣಿ, ಡ್ರೋನ್​ಗಳನ್ನು ಹೊಡೆದುರಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಪಾಕಿಸ್ತಾನದ ಪ್ರಮುಖ ನಗರ ಮೇಲೆ ಕ್ಷಿಪಣಿಗಳ ದಾಳಿ ನಡೆಸಿದೆ. ಪಹಲ್ಗಾಮ್​​ನಲ್ಲಿ 26 ಅಮಾಯಕರನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಉಗ್ರರ ನೆಲೆಗಳನ್ನು 'ಆಪರೇಷನ್ ಸಿಂದೂರ' ಮೂಲಕ ದಿಟ್ಟ ತಿರುಗೇಟು ನೀಡಿದ್ದ ಭಾರತಕ್ಕೆ ಪ್ರತ್ಯುತ್ತರ ನೀಡಲು ಮುಂದಾದ ಪಾಕಿಸ್ತಾನಕ್ಕೆ ಮತ್ತೆ ತಕ್ಕ ಉತ್ತರ ನೀಡಿದೆ. ಪಾಕ್​ನ ಎಫ್​​-16, ಜೆಎಫ್​-17 ಯುದ್ಧ ವಿಮಾನಗಳನ್ನು ಭಾರತೀಯ ಸೇನೆ ಹೊಡೆದು ಉರುಳಿಸಿ ಮತ್ತೊಂದು ಯಶಸ್ಸು ಕಂಡಿದೆ.

ಆಪರೇಷನ್ ಸಿಂದೂರದ ಬಳಿಕ ಜಮ್ಮು-ಕಾಶ್ಮೀರದ ಫೂಂಚ್ ಸೇರಿದಂತೆ ಗಡಿ ಭಾಗದ ಹಲವು ಗ್ರಾಮಗಳಲ್ಲಿ ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನದ ಸೇನೆ 16 ಜನರನ್ನು ಕೊಂದಿತ್ತು. ಅನೇಕರು ಗಾಯಗೊಂಡಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಪ್ರಮುಖ ನಗರಗಳ ಮೇಲೆ ಭಾರತ ಡ್ರೋನ್ ದಾಳಿ ನಡ...