ಭಾರತ, ಮೇ 12 -- ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟ: ಮೇ 7 ರ ರಾತ್ರಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಉಗ್ರ ನೆಲೆಗಳ ಮೇಲೆ ಭಾರತ ನಿಖರವಾದ ದಾಳಿಗಳನ್ನು ನಡೆಸಿತು. ಅಂದಿನಿಂದ, ಪಾಕಿಸ್ತಾನ ಡ್ರೋನ್‌ ಮತ್ತು ಕ್ಷಿಪಣಿಗಳಿಂದ ಭಾರತದ ಮೇಲೆ ನಿರಂತರವಾಗಿ ದಾಳಿ ಮಾಡಿದ್ದು ಇದರಲ್ಲಿ ಹೆಚ್ಚಿನವನ್ನುವ ಗುರಿ ತಲುಪುವ ಮುನ್ನವೇ ಭಾರತ ಹೊಡೆದುರುಳಿಸಿದೆ. ಮೇ 8 ರಂದು ನಡೆದ ಆಪರೇಷನ್ ಸಿಂದೂರ್ ಪತ್ರಿಕಾಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಖುರೇಷಿ, ನಮ್ಮ ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ವಿಫಲಗೊಳಿಸಿದೆ ಎಂದು ಹೇಳಿದ್ದಾರೆ.

ಭಾರತದ ಮೇಲೆ ನಡೆಯುವ ವೈಮಾನಿಕ ದಾಳಿಗಳ ಮೇಲೆ ಕಣ್ಗಾವಲಿರಿಸಿ, ಅವುಗಳನ್ನು ನಾಶಮಾಡಲು ಆದೇಶಿಸುವುದು, ಅವುಗಳ ವಿರುದ್ಧ ಪ್ರತಿದಾಳಿಯನ್ನು ಮಾಡುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ, ಭಾರತದ ಇಂಟಿಗ್ರೇಟೆಡ್ ಏರ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್ (ಐಎಸಿಸಿಎಸ್) ಎಂದು ಕರೆಯಲ್ಪಡುವ ದೊಡ್ಡ ಸಂಯೋಜಿತ ನ...