Bangalore, ಮೇ 19 -- ಪಾಕಿಸ್ತಾನ ಕ್ರಿಕೆಟ್​​ನಲ್ಲಿ ಮತ್ತೆ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಇದಕ್ಕೆ ಕಾರಣ ಏನೆಂದರೆ ಪಾಕ್ ಹೊಸ ಕೋಚ್ ಮೈಕ್ ಹೆಸ್ಸನ್ ಅವರಿಟ್ಟ ವಿಶೇಷ ಬೇಡಿಕೆ. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಬಗ್ಗೆ ಮೈಕ್ ಹೆಸ್ಸನ್ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಪಾಕಿಸ್ತಾನದ ಹೊಸ ಸೀಮಿತ ಓವರ್​​ಗಳ ಮಾರ್ಗದರ್ಶಕ ಹೆಸ್ಸನ್ ಅವರು ಬಾಬರ್ ಮತ್ತು ರಿಜ್ವಾನ್​ರನ್ನು ಮತ್ತೊಮ್ಮೆ ಪರೀಕ್ಷಿಸಲು ಬಯಸಿದ್ದಾರೆ. ಇವರಿಬ್ಬರನ್ನೂ ಟಿ20 ಸ್ವರೂಪಕ್ಕೆ ಆಯ್ಕೆದಾರರು ನಿರ್ಲಕ್ಷಿಸಿದ್ದರ ನಡುವೆಯೂ ಮರಳಿ ಕರೆತರಲು ನೂತನ ತರಬೇತುದಾರ ಬಯಸಿರುವುದು ಅಚ್ಚರಿ ಮೂಡಿಸಿದೆ. ಆದರೆ ಆಯ್ಕೆದಾರರು ಆಯ್ಕೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ, ಕೋಚ್ ಮತ್ತು ಸೆಲೆಕ್ಟರ್ಸ್ ನಡುವೆ ಡಿಶುಂ ಡಿಶುಂ ಏರ್ಪಟ್ಟಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (PCB) ಸಂಬಂಧಿಸಿದ ವಿಶ್ವಾಸಾರ್ಹ ಮೂಲವೊಂದು ಈ ವಾರ ಆಯ್ಕೆದಾರರೊಂದಿಗಿನ ಮಾತುಕತೆಯಲ್ಲಿ ಬಾಬರ್ ಮತ್ತು ರಿಜ್ವಾನ್​ರನ್ನು ಟಿ20 ತಂಡಕ್ಕೆ ಮರಳಿ ಕರೆತರಲು ...