Bengaluru, ಮೇ 12 -- ಮೈಸೂರು : ಭಾರತ ಮತ್ತು ಪಾಕಿಸ್ತಾನದ ಸಂಘರ್ಷ ನಡುವೆ, ಪಾಕಿಸ್ತಾನವನ್ನು ನಂಬುವುದಕ್ಕೆ ಆಗಲ್ಲ, ಕದನ ವಿರಾಮ ಉಲ್ಲಂಘನೆ ಮಾಡೋದು ಅವರಿಗೆ ಹೊಸದಲ್ಲ ಎಂದು ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದ್ದಾರೆ. ಯುದ್ಧದ ಮಧ್ಯೆ ಕದನ ವಿರಾಮ ಘೋಷಣೆಯಾದ ಬಳಿಕ, ಉಭಯ ರಾಷ್ಟ್ರಗಳ ಈಗಿನ ಪರಿಸ್ಥಿತಿ ಕುರಿತು ಅವರು ಮಾತನಾಡಿದ್ದಾರೆ.

ಪಾಕಿಸ್ತಾನ ಪ್ರಚೋದನೆ ಮಾಡುತ್ತಲೇ ಬಂದಿದೆ. ನಮ್ಮ ದೇಶ ಯಾವಾಗಲೂ ಪ್ರಚೋದನೆ ಮಾಡಿಲ್ಲ, ದೇಶದ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಂಡರೂ ನಮ್ಮ ಸಹಕಾರ ಇದೆ. ಭಯೋತ್ಪಾದನೆ ಎಲ್ಲಿಯೂ ಬೆಳೆಯಬಾರದು. ಅದನ್ನು ಬೇರು ಸಮೇತ ಕಿತ್ತು ಹಾಕಬೇಕು. ಪಾಕಿಸ್ತಾನದ ವಿಚಾರದಲ್ಲಿ ಈಗ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ನೋಡೋಣ. ನಮ್ಮ ಸಹಕಾರ ಇದ್ದೇ ಇದೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆಯಾ ಎಂಬುದೆಲ್ಲ ನಮಗೆ ಗೊತ್ತಿಲ್ಲ. ನಾವಂತೂ ಯಾವ ರಾಜಕೀಯವನ್ನು ಮಾಡುತ್ತಿಲ್ಲ. ನ...