Bengaluru, ಮೇ 7 -- ಆಪರೇಷನ್ ಸಿಂಧೂರ: ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ದೊಡ್ಡ ಬೆಳವಣಿಗೆಯೇ ಘಟಿಸಿದೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ 26 ಮಹಿಳೆಯರ ಹಣೆ ಮೇಲಿನ ಸಿಂಧೂರ ಅಳಿಸಿದ ಪಾಪಿ ಪಾಕ್ ಉಗ್ರರ ವಿರುದ್ಧ ಸೇಡಿಗೆ ಸೇಡು, ಪ್ರತೀಕಾರಕ್ಕೆ ಪ್ರತೀಕಾರ ತೀರಿಸಿಕೊಂಡಿದೆ ಭಾರತದ ಸೇನೆ. ಇಂದು (ಮೇ 7ರ) ತಡರಾತ್ರಿ ʻಆಪರೇಷನ್ ಸಿಂಧೂರʼ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದಲ್ಲಿನ 9 ಉಗ್ರ ತಾಣಗಳನ್ನು ಭಾರತೀಯ ಸೇನೆ ಗುರಿಯಾಗಿಸಿ ಹೊಡೆದುರುಳಿಸಿದೆ. ಅಷ್ಟಕ್ಕೂ ಈ ದಾಳಿಗೆ ʻಆಪರೇಷನ್ ಸಿಂಧೂರʼ ಎಂದು ಹೆಸರನ್ನೇಕೆ ಇಟ್ಟರು? ಇಲ್ಲಿದೆ ವಿವರ.
ಆವತ್ತು(ಏಪ್ರಿಲ್ 22) ಕಾಶ್ಮೀರದದ ಬೈಸರನ್ ಗಿರಿಧಾಮದ ಪಹಲ್ಗಾಮ್‌ನಲ್ಲಿ ನೂರಾರು ಪ್ರವಾಸಿಗರು ತಣ್ಣನೆಯ ಪರಿಸರದಲ್ಲಿ ಸ್ವಚ್ಛಂದವಾಗಿ ಮೈ ಮರೆತು, ಮಡದಿ, ಮಕ್ಕಳು, ಕುಟುಂಬದ ಜತೆಗೆ ಕಾಲ ಕಳೆಯುತ್ತಿದ್ದರು. ಅದ್ಯಾವ ಕಡೆಯಿಂದ ಗುಂಡಿನ ಶಬ್ದ ಕೇಳಿತೋ, ಅರೇ ಕ್ಷಣ ಎಲ್ಲರೂ ಗಾಬರಿಯಾದರು. ಬಂದೂಕು ಹಿಡಿದು ಬಂದ ಇಬ್ಬರು ಉಗ್ರರು, ಮ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.