ಭಾರತ, ಏಪ್ರಿಲ್ 23 -- ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್‌ ಲೀಗ್‌ ಐಪಿಎಲ್.‌ ಐಪಿಎಲ್‌ಗೆ ಪೈಪೋಟಿ ನೀಡಲು ವಿಶ್ವದಲ್ಲಿ ಹಲವು ಲೀಗ್‌ಗಳು ಆರಂಭವಾಗಿವೆ. ಆದರೆ, ಮಿಲಿಯನ್‌ ಡಾಲರ್‌ ಟೂರ್ನಿಯಾಗಿರುವ ಐಪಿಎಲ್‌ಗೆ ಸಮನಾಗಿ ಸ್ಪರ್ಧೆಯೊಡ್ಡುವ ಮತ್ತೊಂದು ಟೂರ್ನಿ ಇಲ್ಲ. ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿರುವಾಗಲೇ, ಅತ್ತ ನೆರೆಯ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟೂರ್ನಿ ನಡೆಯುತ್ತಿದೆ. ಉಭಯ ದೇಶಗಳ ಲೀಗ್‌ ಪಂದ್ಯಗಳನ್ನು ಲಕ್ಷಾಂತರ ಜನರು ವೀಕ್ಷಿಸುತ್ತಾರೆ. ಮಾಜಿ ಕ್ರಿಕೆಟಿಗರು ಮತ್ತು ವಿಶ್ಲೇಷಕರು ಕೂಡಾ ಎರಡೂ ಲೀಗ್‌ಗಳಲ್ಲಿನ ಪ್ರಕ್ರಿಯೆಗಳನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಪ್ರತಿಕ್ರಿಯೆ ನೀಡುತ್ತಾರೆ.

ಇತ್ತೀಚೆಗೆ ಪಿಎಸ್‌ಎಲ್‌ ಪಂದ್ಯವನ್ನು ಸ್ಟೇಡಿಯಂನಲ್ಲಿ ಕುಳಿತು ನೋಡುತ್ತಿದ್ದ ಅಭಿಮಾನಿಯೊಬ್ಬ ಐಪಿಎಲ್‌ ಪಂದ್ಯವನ್ನು ಮೊಬೈಲ್‌ನಲ್ಲಿ ವೀಕ್ಷಿಸುತ್ತಿದ್ದ ವಿಡಿಯೋ ವೈರಲ್‌ ಆಗಿತ್ತು. ಇದೀಗ ಪಿಎಸ್‌ಎಲ್‌ ಪಂದ್ಯದ ನಂತರ ಪ್ರಸ್ತುತಿ ಸಮಯದಲ್ಲಿ ಮತ್ತೊಮ್ಮೆ ಐಪಿಎಲ್‌ ಹೆಸರು ...