ಭಾರತ, ಮೇ 15 -- ಭಾರತ-ಪಾಕಿಸ್ತಾನದ ನಡುವಿನ ರಾಜಕೀಯ ಉದ್ವಿಗ್ನತೆಯ ಮಧ್ಯೆ ದೋಹಾದಲ್ಲಿ ಡೈಮಂಡ್ ಲೀಗ್​​ನಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ಎರಡು ಒಲಿಂಪಿಕ್ಸ್ ವಿಜೇತ ನೀರಜ್ ಚೋಪ್ರಾ ಅವರು ಪಾಕಿಸ್ತಾನದ ಜಾವೆಲಿನ್ ಆಟಗಾರ ಅರ್ಷದ್ ನದೀಮ್ ಅವರೊಂದಿಗಿನ ಸಂಬಂಧದ ಕುರಿತು ಮಾತನಾಡಿದ್ದಾರೆ. ಶುಕ್ರವಾರ (ಮೇ 16) ಋತುವಿನ ಆರಂಭಿಕ ಪ್ರದರ್ಶನಕ್ಕೂ ಮುನ್ನ ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಪಾಕಿಸ್ತಾನದ ಒಲಿಂಪಿಕ್ ಚಿನ್ನದ ಪದಕ ವಿಜೇತ ನದೀಮ್​ ಜೊತೆಗಿನ ಸಂಬಂಧದ ಸುತ್ತಲಿನ ಊಹಾಪೋಹಗಳಿಗೆ ಭಾರತದ ತಾರೆ ಉತ್ತರಿಸಿದ್ದಾರೆ.

'ಮೊದಲನೆಯದಾಗಿ ಹೇಳುವುದೇನೆಂದರೆ ನಾನು (ನದೀಮ್ ಅವರೊಂದಿಗೆ) ತುಂಬಾ ಬಲವಾದ ಮತ್ತು ಆಳವಾದ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಲು ನಾನು ನಿಜವಾಗಿಯೂ ಬಯಸುತ್ತೇನೆ' ಎಂದು ಚೋಪ್ರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಕ್ರೀಡಾಪಟುಗಳಾಗಿ ನಾವು ಮಾತನಾಡಬೇಕು. ಅಥ್ಲೆಟಿಕ್ಸ್ ಸಮುದಾಯದಲ್ಲಿ ಮತ್ತು ಪ್ರಪಂಚದಾದ್ಯಂತದ ಕೆಲವು ಉತ್ತಮ ಸ್ನೇಹಿತರನ್ನು ಹೊಂದಿದ್ದೇನೆ. ಜಾವೆಲಿನ್ ಎಸೆತಗಾರರು ಮಾತ್ರ...