ಭಾರತ, ಏಪ್ರಿಲ್ 7 -- ವರ್ಷದಿಂದ ವರ್ಷಕ್ಕೆ ಐಪಿಎಲ್‌ ಟೂರ್ನಿಯ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಬ್ರಾಂಡ್‌ ಮೌಲ್ಯ ಕೂಡಾ ಬಾನೆತ್ತರಕ್ಕೆೇರುತ್ತಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹಾವು ಏಣಿಯಾಟ ನಡೆಯುತ್ತಿದೆ. ತಂಡವು ಮೇಲಿಂದ ಮೇಲೆ ವೈಫಲ್ಯ ಎದುರಿಸುತ್ತಿದ್ದು, 'ಅನಿಷ್ಠಕ್ಕೆಲ್ಲ ಶನೀಶ್ವರನೇ ಕಾರಣ' ಎಂದು ಬಿಸಿಸಿಐ ಹಾಗೂ ಐಪಿಎಲ್‌ ಮೇಲೆ ಪಾಕಿಸ್ತಾನ ಗೂಬೆ ಕೂರಿಸುತ್ತಿದೆ. ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳ ಆಟಗಾರರು ಐಪಿಎಲ್‌ನಲ್ಲಿ ಆಡಿ ಬಲಿಷ್ಠರಾಗುತ್ತಿದ್ದಾರೆ. ಆದರೆ ಪಾಕಿಸ್ತಾನ ಕ್ರಿಕೆಟ್‌ ಆಟಗಾರರಿಗೆ ಆ ಅವಕಾಶ ಇಲ್ಲ. ಇದರಿಂದ ಪಾಕ್‌ ಕ್ರಿಕೆಟಿಗರಿಗೆ ಬಲಿಷ್ಠ ಆಟಗಾರರನ್ನು ಎದುರಿಸುವ ಅವಕಾಶ ಹೆಚ್ಚು ಸಿಗುತ್ತಿಲ್ಲ. ಇದು ಪಾಕ್‌ ಕಳಪೆ ಪ್ರದರ್ಶನಕ್ಕೆ ಕಾರಣ ಎಂಬುದು ಅವರ ಮೊಂಡು ವಾದ.

ಒಂದು ಕಾಲದಲ್ಲಿ ಬಲಿಷ್ಠ ಕ್ರಿಕೆಟ್‌ ತಂಡವಾಗಿದ್ದ ಪಾಕಿಸ್ತಾನ, ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. 2017ರ ಚಾಂಪಿಯನ್ಸ್ ಟ್ರೋಫಿ ನಂತರ ದೇಶವು ಇನ್ನೂ ಐಸಿಸಿ ಪಂದ್ಯಾವಳಿಯನ್ನು ಗೆದ್ದಿಲ್ಲ...