ಬೆಂಗಳೂರು, ಮೇ 9 -- ಭಾರತ ಸೇನಾಪಡೆಯು ಬಲಿಷ್ಠವಾಗಿದ್ದು, ಶತ್ರುದಾಳಿಯನ್ನು ಸದೆಬಡಿಯುವ ಸಾಮರ್ಥ್ಯವಿದೆ. ಹಾಗಿದ್ರೆ ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ಸುಲಭವಾಗಿ ಸದೆಬಡಿದ ಭಾರತದ ಆ ಶಕ್ತಿಯ ಬಗ್ಗೆ ತಿಳಿಯೋಣ. ಪಾಕಿಸ್ತಾನದ ದಾಳಿಯನ್ನು ತಡೆಯಲು ಭಾರತೀಯ ವಾಯುಪಡೆಯು ರಷ್ಯಾ ನಿರ್ಮಿತ 'S-400' ಎಂಬ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಬಳಸಿತು. ಭಾರತದ ಮಿಲಿಟರಿ ನೆಲೆಗಳ ಮೇಲೆ ಪಾಕಿಸ್ತಾನ ಹಾರಿಸಿದ 15 ಕ್ಷಿಪಣಿಗಳನ್ನು ತಟಸ್ಥಗೊಳಿಸಲು, ಸುಧಾರಿತ ರಾಡಾರ್ ಮತ್ತು ಶತ್ರುದಾಳಿಯನ್ನು ತಡೆಯುವ ಸಾಮರ್ಥ್ಯಗಳಿಗೆ ಹೆಸರುವಾಸಿಯಾದ ಈ ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತ ಬಳಸಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಶತ್ರು ದಾಳಿಯನ್ನು ತಡೆಯಲು ಭಾರತ ಬಳಸುವ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯು, ವಿಶ್ವದ ಅತ್ಯಂತ ಮಾರಕವಾದ ಭೂಮಿಯಿಂದ ಗಾಳಿಗೆ ಹಾರುವ ಕ್ಷಿಪಣಿಗಳು ಎಂದು ಪರಿಗಣಿಸಲಾಗಿದೆ. ಇದರ ಸಾಮರ್ಥ್ಯ ಅಷ್ಟಿಷ್ಟಲ್ಲ. ಭಾರತದ ಮೇಲೆ ದಾಳಿ ನಡೆಸಲು ನೆರೆಯ ದೇಶಗಳು ಹತ್ತು ಬಾರಿ ಯೋಚಿಸಬೇಕಾಗುತ್ತದೆ. ಎಸ್ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.