Bengaluru, ಮೇ 9 -- ನವದೆಹಲಿ: ಉಗ್ರ ನಿಗ್ರಹ ಕಾರ್ಯಾಚರಣೆಯ ಸಂದರ್ಭದಲ್ಲಿ ಸೇನೆ ಮತ್ತು ಭಾರತೀಯ ವಾಯುಪಡೆಯ ನೆಲೆಗಳ ಮೇಲೆ ಪಾಕಿಸ್ತಾನ ಹಾರಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ನಾಶಪಡಿಸಲು ಭಾರತೀಯ ಸೇನೆ ಗುರುವಾರ ರಷ್ಯಾ ಮತ್ತು ಇಸ್ರೇಲ್ ನಿರ್ಮಿತ ಶಸ್ತ್ರಾಸ್ತ್ರಗಳು ಮತ್ತು ಸ್ಥಳೀಯವಾಗಿ ಉತ್ಪಾದಿಸಿದ ವ್ಯವಸ್ಥೆಗಳ ಮಿಶ್ರಣವನ್ನು ಬಳಸಿದೆ. ಮೇ 7ರ ಮಧ್ಯರಾತ್ರಿಯಲ್ಲಿ ಮತ್ತು ಮೇ 8 ರ ಸಂಜೆ ಪಾಕಿಸ್ತಾನ ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡಿದೆ.
ಮೊದಲ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನ ದೇಶದ ಉತ್ತರ ಮತ್ತು ಪಶ್ಚಿಮದ 15 ನಗರಗಳನ್ನು ಗುರಿಯಾಗಿಸಿಕೊಂಡರೆ, ಎರಡನೇ ಬಾರಿ ದಾಳಿಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಇತರ ಭಾಗಗಳು ಮತ್ತು ಪಂಜಾಬ್ ಮತ್ತು ರಾಜಸ್ಥಾನದ ಗಡಿ ಜಿಲ್ಲೆಗಳನ್ನು ಗುರಿಯಾಗಿಸಿಕೊಂಡಿದೆ. ಲಾಹೋರ್ ಸೇರಿದಂತೆ ನೆರೆಯ ದೇಶದ ಮಿಲಿಟರಿ ಗುರಿಗಳ ಮೇಲೆ ಪ್ರತಿದಾಳಿ ನಡೆಸುವ ಮೂಲಕ ಭಾರತವು ಪಾಕಿಸ್ತಾನದ ಮೊಂಡಾಟಕ್ಕೆ ಪ್ರತಿಕ್ರಿಯಿಸಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ...
Click here to read full article from source
To read the full article or to get the complete feed from this publication, please
Contact Us.