ಭಾರತ, ಫೆಬ್ರವರಿ 25 -- 1996ರ ನಂತರ ಅಂದರೆ 29 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ (ICC) ಟೂರ್ನಿಯೊಂದನ್ನು ಆಯೋಜಿಸಿದ ಪಾಕಿಸ್ತಾನ (Pakistan) ಮಾಡುತ್ತಿರುವ ಕಿತಾಪತಿ ಒಂದೆರಡಲ್ಲ. ಚಾಂಪಿಯನ್ಸ್ ಟ್ರೋಫಿ (Champions Trophy) ಆರಂಭಕ್ಕೂ ಮುನ್ನ ಕಾರ್ಯಕ್ರಮವೊಂದರಲ್ಲಿ ಭಾರತದ ಬಾವುಟವನ್ನು ಹಾರಿಸದೆ ದೊಡ್ಡ ವಿವಾದ ಸೃಷ್ಟಿಸಿತ್ತು. ಇದೀಗ ಲಾಹೋರ್ ಕ್ರಿಕೆಟ್ ಮೈದಾನದಲ್ಲಿ (Lahore Cricket Stadium) ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸಿದ್ದಕ್ಕೆ ಯುವಕನೊಬ್ಬನನ್ನು ಥಳಿಸಿ ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗಿದ್ದು, ಚರ್ಚೆಗೂ ಗ್ರಾಸವಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದರೂ ಭದ್ರತಾ ಸಮಸ್ಯೆ ಕಾರಣ ಭಾರತೀಯ ಕ್ರಿಕೆಟ್ ತಂಡವನ್ನು (Indian Cricket Team) ಅಲ್ಲಿಗೆ ಕಳುಹಿಸಲಾಗಿಲ್ಲ. ರೋಹಿತ್​ ಪಡೆ ದುಬೈನಲ್ಲಿ ತನ್ನೆಲ್ಲಾ ಪಂದ್ಯ ಆಡುತ್ತಿದೆ. ಉಳಿದಂತೆ ಪಾಕ್ ಸೇರಿ 7 ತಂಡಗಳು ಲಾಹೋರ್,...