Bengaluru, ಮೇ 13 -- ನವದೆಹಲಿ: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲಿನ ವಾಯುದಾಳಿಯ ಸಂದರ್ಭ, ಅಲ್ಲಿನ ವಿಕಿರಣ ಘಟಕಕ್ಕೆ ಹಾನಿಯಾಗಿ ವಿಕಿರಣ ಸೋರಿಕೆಯಾಗಿದೆ ಎಂಬ ಸುದ್ದಿ ಹಬ್ಬಿದ್ದು, ಅದು ಸಂಪೂರ್ಣ ಸುಳ್ಳು ಎಂದು ಸೇನೆ ಹೇಳಿದೆ. ಅಂತಹ ಯಾವುದೇ ಸ್ಥಳಗಳ ಬಗ್ಗೆ ನಮಗೆ ತಿಳಿದಿಲ್ಲ, ನಾವು ಯಾವುದನ್ನೂ ಹಾನಿ ಮಾಡಿಲ್ಲ, ಉಗ್ರರ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ಆದರೆ ಪಾಕಿಸ್ತಾನದ ಅಣ್ವಸ್ತ್ರ ಘಟಕಕ್ಕೆ ಬಾಂಬ್ ದಾಳಿಯಿಂದ ಹಾನಿಯಾಗಿದೆ, ಅದರಿಂದ ವಿಕಿರಣ ಸೋರಿಕೆ ಉಂಟಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಡಿದೆ.

ಅಣ್ವಸ್ತ್ರ ಘಟಕಕ್ಕೆ ಹಾನಿಯಾಗಿರುವ ಬಗ್ಗೆ ಭಾರತೀಯ ಸೇನೆಯ ಮೂರೂ ಘಟಕಗಳ ಮುಖ್ಯಸ್ಥರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ದಾಳಿಯನ್ನು ನಾವು ನಡೆಸಿಲ್ಲ. ಕೇವಲ ಉಗ್ರರ ನೆಲೆಗಳನ್ನಷ್ಟೇ ಹುಡುಕಿ ದಾಳಿ ಮಾಡಿ ನಾಶಪಡಿಸಲಾಗಿದೆ. ಅದರ ಹೊರತು ಇತರ ಯಾವುದೇ ಕಟ್ಟಡ, ಸರ್ಕಾರದ ಅಂಗಸಂಸ್ಥೆಗಳ ವಿರುದ್ಧ ದಾಳಿ ನಡೆಸಿಲ್ಲ ಎಂದು ಹೇಳಿದ್ದಾರೆ. ಆದ...