ಭಾರತ, ಏಪ್ರಿಲ್ 6 -- Global Kannadiga: ಇದು ಸೋಷಿಯಲ್ ಮೀಡಿಯಾ ಜಮಾನ.. ಮನೆ ಮನೆಯಲ್ಲಿಯೂ ಯೂಟ್ಯೂಬ್‌ ಹಂಗಾಮ. ಇಂತಹ ಕಾಲಘಟ್ಟದಲ್ಲಿ ಯೂಟ್ಯೂಬರ್‌ಗಳು ಹೊಸ ಸಾಹಸಗಳನ್ನು ಮಾಡಲೇಬೇಕು. ಭಿನ್ನ-ವಿಭಿನ್ನ ಕಂಟೆಂಟ್‌ಗಳನ್ನು ವೀಕ್ಷಕರಿಗೆ ಕೊಡಬೇಕು. ಅಂತಹ ಸಾಹಸವನ್ನು ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಖ್ಯಾತಿಯ ಮಹಾಬಲ ರಾಮ್ ಮಾಡಿದ್ದಾರೆ.

ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಮೂಲಕ ಹೊಸ ಬಗೆಯ ಕಂಟೆಂಟ್ ಕೊಡ್ತಿರುವ ಮಹಾಬಲ ರಾಮ್ ಮೊದಲ ಬಾರಿಗೆ ಪಾಕಿಸ್ತಾನ ಸುತ್ತಿ ಬಂದಿದ್ದಾರೆ. ಅದು ಕೇವಲ ಒಂದೆರೆಡು ದಿನವಲ್ಲ. ಬರೋಬ್ಬರಿ 7 ದಿನದ ಪ್ರವಾಸ. ಏಳು ದಿನ ಪಾಕಿಸ್ತಾನ ಸುತ್ತಿ ಬಂದಿದ್ದು, ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದು, ಇಂಡಿಯಾ ಪಾಕ್ ಪಂದ್ಯ ನೋಡಿ ಖುಷಿಪಟ್ಟ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ. ಪಾಕಿಸ್ತಾನದಲ್ಲಿ ಸುತ್ತಿ ವಿಡಿಯೋ ಮಾಡಿದ ಮೊದಲ ಯೂಟ್ಯೂಬರ್ ಎಂಬ ಖ್ಯಾತಿ ಗ್ಲೋಬಲ್ ಕನ್ನಡಿಗ ರಾಮ್ ಗೆ ಸಿಕ್ಕಿದೆ. ಇನ್ನೂ ಅವರ ಏಳು ದಿನದ ಪಾಕಿಸ್ತಾನದ ಪ್ರವಾಸ ಹೇಗಿತ್ತು ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:...