Bengaluru, ಮೇ 18 -- ನವದೆಹಲಿ: ಪಾಕಿಸ್ತಾನದ ಗುಪ್ತಚರ ಏಜೆನ್ಸಿಗಳಿಗಾಗಿ ಭಾರತದ ವಿರುದ್ಧ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪರ ಆಕೆಯ ತಂದೆ ಹೇಳಿಕೆ ನೀಡಿದ್ದು, ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಹರಿಯಾಣದ ಯೂಟ್ಯೂಬರ್ ಮತ್ತು ಪಾಕಿಸ್ತಾನದ ಗೂಢಚಾರಿ ಜ್ಯೋತಿ ಮಲ್ಹೋತ್ರಾ ಅವರ ತಂದೆ ಹ್ಯಾರಿಸ್ ಮಲ್ಹೋತ್ರಾ, ತಮ್ಮ ಮಗಳು ವೀಡಿಯೊಗಳನ್ನು ಚಿತ್ರೀಕರಿಸಲು ನೆರೆಯ ದೇಶಕ್ಕೆ ಭೇಟಿ ನೀಡಿದ್ದಳು. ಆ ಸಂದರ್ಭದಲ್ಲಿ ಆಕೆಗೆ ಅಲ್ಲಿ ಕೆಲವು ಸ್ನೇಹಿತರ ಪರಿಚಯವಾಗಿತ್ತು ಎಂದಿದ್ದಾರೆ.

ಅವಳು ಯೂಟ್ಯೂಬ್ ವಿಡಿಯೊಗಳನ್ನು ಮಾಡುತ್ತಿದ್ದಳು. ಅದಕ್ಕಾಗಿ ಪಾಕಿಸ್ತಾನ ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಅವಳು ಅಲ್ಲಿ ಕೆಲವು ಸ್ನೇಹಿತರನ್ನು ಹೊಂದಿದ್ದಾಳೆ. ಅಲ್ಲಿ ಗೆಳೆಯರು ಇದ್ದರೆ, ಅವರಿಗೆ ಕರೆ ಮಾಡಬಾರದೇ ಎಂದು ಜ್ಯೋತಿಯ ತಂದೆ ಹ್ಯಾರಿಸ್ ಮಲ್ಹೋತ್ರಾ ಪೊಲೀಸರನ್ನು ಪ್ರಶ್ನಿಸಿದ್ದಾರೆ. ನನಗೆ ಯಾವುದೇ ಬೇಡಿಕೆಗಳಿಲ್ಲ, ಆದರೆ ನಮ್ಮ ಫೋನ್‌ಗಳನ್ನು ನಮಗೆ ವಾಪಸ್ ನೀ...