Bengaluru, ಮೇ 3 -- ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರದ ಕ್ರಮವಾಗಿ ವಿವಿಧ ರೀತಿಯ ನಿರ್ಬಂಧ ಕ್ರಮಗಳನ್ನು ಭಾರತ ಪಾಕಿಸ್ತಾನದ ಮೇಲೆ ಹೇರುತ್ತಿದೆ. ರಾಜತಾಂತ್ರಿಕ ಕ್ರಮದ ಮುಂದುವರಿದ ಭಾಗವಾಗಿ ವಾಣಿಜ್ಯ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಪಾಕಿಸ್ತಾನದಿಂದ ಎಲ್ಲಾ ರೀತಿಯ ಸರಕುಗಳ ನೇರ ಮತ್ತು ಪರೋಕ್ಷ ಆಮದಿಗೆ ಭಾರತವು ತಕ್ಷಣದ ನಿಷೇಧವನ್ನು ವಿಧಿಸಿದೆ. ಈ ಆದೇಶವು ವಿದೇಶಿ ವ್ಯಾಪಾರ ನೀತಿ 2023 ಅನ್ನು ತಿದ್ದುಪಡಿ ಮಾಡಿದ್ದು, ಇದು ಪಾಕಿಸ್ತಾನದಿಂದ ಬರುವ ಅಥವಾ ರಫ್ತು ಮಾಡುವ ಯಾವುದೇ ಸರಕುಗಳ ಆಮದು ಅಥವಾ ಸಾಗಣೆಯನ್ನು ಮುಂದಿನ ಆದೇಶದವರೆಗೆ ನಿಷೇಧಿಸುವ ನಿಬಂಧನೆಯನ್ನು ಸೇರಿಸಿದೆ.
ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿರ್ಬಂಧವನ್ನು ಜಾರಿಗೆ ತರಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ತಿಳಿಸಿದೆ. ಭಾರತ ಸರ್ಕಾರವು ವಿದೇಶಿ ವ್ಯಾಪಾರ ನೀತಿಯಲ್ಲಿ ಪಾಕಿಸ್ತಾನದಿಂದ ಆಮದು ನಿಷೇಧ ಎಂಬ ಶೀರ್ಷಿಕೆಯಡಿ ಹೊಸ ನಿಬಂಧನೆಯನ್ನು ಔಪಚಾರಿಕವಾಗಿ ಸೇರಿಸಿದೆ, ಇದರಿಂದಾಗಿ ಪಾ...
Click here to read full article from source
To read the full article or to get the complete feed from this publication, please
Contact Us.