ಭಾರತ, ಏಪ್ರಿಲ್ 23 -- ಬೆಂಗಳೂರು: ಕಾಶ್ಮೀರದ ಪಹಲ್‌ಗಾಮ್‌ ಉಗ್ರರ ದಾಳಿಗೆ ಬಲಿಯಾದ ಕನ್ನಡಿಗರಿಬ್ಬರ ಪಾರ್ಥಿವ ಶರೀರ ಇಂದು (ಏಪ್ರಿಲ್ 23) ತಾಯ್ನಾಡಿಗೆ ತಲುಪುವ ನಿರೀಕ್ಷೆ ಇದೆ. ಅವರ ಪಾರ್ಥಿವ ಶರೀರಗಳನ್ನು ಹೊತ್ತು ತರುವ ವಿಮಾನ, ಹೊರಡುವ ಸಮಯ, ದಾರಿ ಹಾಗೂ ಜತೆಗೆ ಯಾರು ಇರುತ್ತಾರೆ ಎಂಬಿತ್ಯಾದಿ ವಿವರಗಳನ್ನು ಸರ್ಕಾರ ಪ್ರಕಟಿಸಿದೆ. ಇದರಂತೆ, ಹಾವೇರಿ ಮೂಲದ ಬೆಂಗಳೂರಿನ ಟೆಕ್ಕಿ ಭರತ್ ಭೂಷಣ್ ಅವರ ಮೃತದೇಹ ಮುಂಬಯಿ ಮೂಲಕವಾಗಿ ಬೆಂಗಳೂರು ತಲುಪಲಿದೆ. ಇದೇ ರೀತಿ ಶಿವಮೊಗ್ಗದ ಮಂಜುನಾಥ್ ಅವರ ಮೃತದೇಹ ನವದೆಹಲಿ, ಬೆಂಗಳೂರು ಮೂಲಕವಾಗಿ ಶಿವಮೊಗ್ಗಕ್ಕೆ ತಲುಪಲಿದೆ.

1) ಭರತ್ ಭೂಷಣ್‌ ಪಾರ್ಥಿವ ಶರೀರ: ಪಹಲ್‌ಗಾಮ್‌ ಉಗ್ರರ ದಾಳಿಗೆ ಮೃತಪಟ್ಟ ಇಬ್ಬರು ಕನ್ನಡಿಗರ ಪೈಕಿ ಬೆಂಗಳೂರು ಟೆಕ್ಕಿ, ರಾಣೆಬೆನ್ನೂರು ಮೂಲದ ಭರತ್ ಭೂಷಣ್ ಅವರ ಮೃತದೇಹವನ್ನು 6E 3105 / 6E 5252 ವಿಮಾನ ಮೂಲಕ ಸಾಗಿಸಲಾಗುತ್ತಿದೆ. ಮುಂಬಯಿ ಮೂಲಕವಾಗಿ ಬೆಂಗಳೂರಿಗೆ ಸಾಗಿಸಲಾಗುತ್ತಿದೆ. ಇದೇ ವಿಮಾನಗಳಲ್ಲಿ ಸುಜಾತಾ, ಹವಿಷ್‌, ಪ್ರೀತಂ ಚನ್ನವೀರಪ್ಪ ನರಸಿಂಹ,...