ಭಾರತ, ಏಪ್ರಿಲ್ 23 -- ಪಹಲ್‌ಗಾಮ್ ಉಗ್ರದಾಳಿ: ಕಾಶ್ಮೀರದ ಪಹಲ್‌ಗಾಮ್‌ ಉಗ್ರದಾಳಿಗೆ ಬಲಿಯಾದವರ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಇಬ್ಬರು ಕನ್ನಡಿಗರು. ಶಿವಮೊಗ್ಗದ ಮಂಜುನಾಥ್ ರಾವ್ ಅವರಷ್ಟೇ ಅಲ್ಲ, ಬೆಂಗಳೂರಿನ ಟೆಕ್ಕಿ ಭರತ್ ಭೂಷಣ್ ಕೂಡ ಉಗ್ರರ ಗುಂಡಿನ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ಸಚಿವ ಸಂತೋಷ್‌ ಲಾಡ್‌ ನೇತೃತ್ವದ ತಂಡ ರಾಜ್ಯದ ತಂಡವೂ ಪಹಲ್ಗಾಮ್‌ಗೆ ತೆರಳುತ್ತಿರುವುದಾಗಿ ಸರ್ಕಾರ ತಿಳಿಸಿದೆ.

ಪಹಲ್‌ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬೆಂಗಳೂರಿನ ಸುಂದರ ನಗರದ ಗೋಕುಲ ಬಡಾವಣೆಯ ನಿವಾಸಿ, ಸಾಫ್ಟ್‌ವೇರ್ ಎಂಜಿನಿಯರ್ ಭರತ್‌ ಭೂಷಣ್ (41) ಮೃತಪಟ್ಟಿದ್ದಾರೆ. ಭರತ್ ಭೂಷಣ್ ಅವರು ಪತ್ನಿ ಸುಜಾತ ಹಾಗೂ ಮೂರು ವರ್ಷದ ಪುತ್ರ ನತೆಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಉಗ್ರರು ಭರತ್ ಭೂಷಣ್ ಅವರನ್ನು ಹತ್ಯೆ ಮಾಡಿದ್ದು, ಸುಜಾತ ಮತ್ತು ಮೂರು ವರ್ಷದ ಮಗು ದಾಳಿಯಿಂದ ಪಾರಾಗಿದ್ದಾರೆ.

ಬೆಂಗಳೂರು ಟೆಕ್ಕಿ ಭರತ್ ಭೂಷಣ್ ...