ಭಾರತ, ಏಪ್ರಿಲ್ 23 -- ಪಹಲ್‌ಗಾಮ್ ಉಗ್ರದಾಳಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮಗ ಅಭಿಜಯನ ಸಾಧನೆ ಹಿನ್ನೆಲೆಯಲ್ಲಿ ಖುಷಿಯಿಂದ ಕುಟುಂಬ ಸಹಿತ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಮಂಜುನಾಥ್ ರಾವ್ ಉಗ್ರ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಈ ದಾಳಿಗೂ ಕೆಲವೇ ಗಂಟೆ ಮೊದಲು ಬೋಟ್‌ ರೈಡ್‌ನಲ್ಲಿ ಮಂಜುನಾಥ ರಾವ್ ಮತ್ತು ಪಲ್ಲವಿ ಖುಷಿಯಿಂದ ಸಂಭ್ರಮಪಟ್ಟ ಕ್ಷಣದ ವಿಡಿಯೋ ವೈರಲ್ ಆಗಿದೆ. ಇದನ್ನು ಸಿಟಿಜೆನ್ಸ್ ಮೂವ್‌ಮೆಂಟ್ ಈಸ್ಟ್‌ ಬೆಂಗಳೂರು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಉಗ್ರದಾಳಿ ಹಾಗೂ ಅದಕ್ಕೂ ಮೊದಲ ಕ್ಷಣಗಳನ್ನು ನೆನಪಿಸಿದೆ.

ಪಹಲ್‌ಗಾಮ್‌ನ ಆಸ್ಪತ್ರೆಯಲ್ಲಿದ್ದ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಸುದ್ದಿ ಚಾನೆಲ್‌ಗಳೊಂದಿಗೆ ಮಾತನಾಡುತ್ತ, ನಮ್ಮ ಕಣ್ಣೆದುರೇ ಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಉಗ್ರರ ಬಳಿ, ನಮ್ಮನ್ನೂ ಹತ್ಯೆ ಮಾಡುವಂತೆ ಬೇಡಿಕೊಂಡೆವು. ಆದರೆ, ಅವರು ನನಗೆ ಹೇಳಿದ್ದು ಇಷ್ಟು - ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ವಿಷಯ ತಿಳಿಸುವುದಕ್ಕಾಗಿ ಜೀವಂತ ಬಿಡುತ್ತಿದ...