ಭಾರತ, ಏಪ್ರಿಲ್ 23 -- ಪಹಲ್‌ಗಾಮ್ ಉಗ್ರದಾಳಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪುತ್ರ ಅಭಿಜಯನ ಸಾಧನೆಯಿಂದ ಖುಷಿಯಾಗಿ ಅದನ್ನು ಸಂಭ್ರಮಿಸುವುದಕ್ಕೆ ಕುಟುಂಬದ ಜೊತೆಗೆ ಮಂಜುನಾಥ್ ರಾವ್ ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ದುರದೃಷ್ಟವಶಾತ್ ಪಹಲ್‌ಗಾಮ್‌ನಲ್ಲಿ ನಡೆದ ಉಗ್ರ ದಾಳಿಗೆ ಮಂಜುನಾಥ್ ರಾವ್ (47) ಮೃತಪಟ್ಟಿದ್ದಾರೆ. ಅವರ ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜಯ ಉಗ್ರ ದಾಳಿಯಿಂದ ಪಾರಾಗಿದ್ದಾರೆ.

ಇತ್ತೀಚೆಗೆ ಪ್ರಕಟವಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಮಂಜುನಾಥ್ ರಾವ್ ಮತ್ತು ಪಲ್ಲವಿ ದಂಪತಿಯ ಪುತ್ರ ಅಭಿಜಯ ವಾಣಿಜ್ಯ ವಿಭಾಗದಲ್ಲಿ ಶೇಕಡ 98 ಅಂಕ ಗಳಿಸಿದ್ದ. ಅದೇ ಖುಷಿಯಲ್ಲಿ ಮಂಜುನಾಥ್ ರಾವ್ ಕುಟುಂಬ ಕಾಶ್ಮೀರ ಪ್ರವಾಸ ಕೈಗೊಂಡಿತ್ತು. ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಮ್ಯಾಮ್ಕೋಸ್‌ನ ಬೀರೂರು ಶಾಖೆಯಲ್ಲಿ ವ್ಯವಸ್ಥಾಪಕಿ.

ಮಂಜುನಾಥ್ ರಾವ್ ಅವರು ಶಿವಮೊಗ್ಗದ ವಿಜಯನಗರ ಬಡಾವಣೆಯ ಮೂರನೇ ಅಡ್ಡರಸ್ತೆಯ ನಿವಾಸಿ. ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಅವರ ಪುತ್ರ ಅಭಿಜಯ ಶಿವಮೊಗ್ಗದ ವಿದ್ಯ...