ಭಾರತ, ಏಪ್ರಿಲ್ 23 -- ಪಹಲ್‌ಗಾಮ್ ಉಗ್ರದಾಳಿ: ಜಮ್ಮು-ಕಾಶ್ಮೀರದ ಅನಂತನಾಗ ಜಿಲ್ಲೆಯ ಪಹಲ್‌ಗಾಮ್‌ ಪ್ರದೇಶದಲ್ಲಿ ಮಂಗಳವಾರ (ಏಪ್ರಿಲ್ 22) ಟಿಆರ್‌ಎಫ್‌ ಉಗ್ರರು ನಡೆಸಿದ ದಾಳಿಗೆ ಕನಿಷ್ಠ 26 ಜನ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿರುವುದಾಗಿ ಮಾಧ್ಯಮಗಳು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ. ಉಗ್ರದಾಳಿ ಬೆನ್ನಲ್ಲೇ ಭದ್ರತಾ ಪಡೆಗಳು ಉಗ್ರ ನಿಗ್ರಹ ಕಾರ್ಯವನ್ನು ಚುರುಕುಗೊಳಿಸಿವೆ. ಈ ದಾಳಿಗೆ ತಕ್ಕ ಬೆಲೆಯನ್ನು ಉಗ್ರರು ತೆರಬೇಕಾದೀತು ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಎಚ್ಚರಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ಜಮ್ಮು- ಕಾಶ್ಮೀರಕ್ಕೆ ತೆರಳಿದ್ದು, ಶ್ರೀನಗರ ತಲುಪಿ ಅಲ್ಲಿ ಉನ್ನತ ಮಟ್ಟದ ಭದ್ರತಾ ಪರಾಮರ್ಶೆ ಸಭೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರೂ ಸೌದಿ ಅರೇಬಿಯಾ ಪ್ರವಾಸ ರದ್ದುಗೊಳಿಸಿ ಹಿಂದಿರುಗಿದ್ದಾರೆ. ಅವರು ಸಚಿವ ಅಮಿತ್ ಶಾ ಅವರೊಂದಿಗೆ ಸಂಪರ್ಕದಲ್ಲಿದ್ದು ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಏಜೆನ್ಸಿಗಳು ವರದಿ ಮಾಡಿವೆ. ಪಹಲ್‌ಗಾಮ್ ಉಗ್ರದಾಳ...