ಭಾರತ, ಏಪ್ರಿಲ್ 24 -- ಕಾಶ್ಮೀರದ ಪಹಲ್ಗಾಮ್‌ನಲ್ಲಿ ಈ ಉಗ್ರ ಕೃತ್ಯವೆಸಗಿದ ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್‌) ಭಾರತದಲ್ಲಿ ನಿಷೇಧಿತ ಸಂಘಟನೆ. ಇದಕ್ಕೂ ಪಾಕಿಸ್ತಾನದಲ್ಲಿರುವ ಲಷ್ಕರ್ ಏ ತೊಯ್ಬಾ ಸಂಘಟನೆಗೂ ಸಂಬಂಧ ಇದೆ. ಭಾರತ ಸರ್ಕಾರ ಯಾವ ರೀತಿ ಕ್ರಮ ಜರುಗಿಸಲಿದೆ ಎಂಬ ಕುತೂಹಲ ಹೆಚ್ಚಾಗಿರುವಾಗಲೇ, ಅಮೆರಿಕದ ಸಿಐಎ 1993ರಲ್ಲಿ ಸಿದ್ಧಪಡಿಸಿದ ಭಾರತ- ಪಾಕ್ ಯುದ್ಧ ಸಾಧ್ಯತೆ ಕುರಿತ ವರದಿ ವಿವರ ವೈರಲ್ ಆಗಿದೆ.

ಪಹಲ್ಗಾಮ್‌ ದಾಳಿಗೆ ಮೊದಲು ಮತ್ತು ನಂತರದಲ್ಲಿ ಪಾಕಿಸ್ತಾನದ ಸೇನಾಧಿಕಾರಿಗಳು ಹಾಗೂ ರಾಜಕೀಯ ನೇತಾರರ ನಡೆ ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದೆ. ಪಹಲ್ಗಾಮ್ ದಾಳಿ ಸಂದರ್ಭದಲ್ಲಿ ಉಗ್ರ ನಿಗ್ರಹದ ಮಾತು ಹೆಚ್ಚಾಗಿ ಕೇಳಿಬಂದಿದ್ದು ಅಮೆರಿಕ ಸೇರಿ ವಿವಿಧ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತವು. ಈಗ ಭಾರತ ಸರ್ಕಾರ, ಉಗ್ರ ನಿಗ್ರಹದ ಕಾರ್ಯಾಚರಣೆ ಬಿಗಿಗೊಳಿಸುವುದಾಗಿ ಹೇಳಿದೆ.

ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ) 1993ರಲ್ಲಿ ಸಿದ್ಧಪಡಿಸಿದ ರಹಸ್ಯ ವರದಿಯ ಅಂಶಗಳು ಬಹಿರಂಗವಾಗಿದ್ದು, ನ್ಯಾ...