Delhi, ಏಪ್ರಿಲ್ 23 -- ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಭಾಗದಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿಯ ನಂತರ ಅಲ್ಲಿನ ಪ್ರವಾಸೋದ್ಯಮ ಚಿತ್ರಣವೇ ಬದಲಾಗಿದ್ದು. ಕಾಶ್ಮೀರಕ್ಕೆ ಬಂದವರು ತರಾತುರಿಯಲ್ಲಿ ಊರಿಗೆ ಮರಳಲು ಮುಗಿಬಿದ್ದಿದ್ದಾರೆ. ಇದರಿಂದಾಗಿ ವಿಮಾನ ಯಾನದ ದರ ನಾಲ್ಕೈದು ಪಟ್ಟು ಏರಿಕೆ ಕಂಡಿದೆ. ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಕಾಶ್ಮೀರದ ಪ್ರವಾಸಿಗರು ತಮ್ಮ ಊರುಗಳಿಗೆ ಮರಳಲು ಮೊದಲ ವಿಮಾನವನ್ನು ಹಿಡಿಯಲು ಧಾವಿಸುತ್ತಿದ್ದು. ಕಾಶ್ಮೀರಿ ನಗರದಿಂದ ಹೊರಹೋಗುವ ಕೆಲವು ವಿಮಾನಗಳ ಪ್ರಯಾಣ ದರವು ಗಗನಕ್ಕೇರಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಮೇಕ್ ಮೈಟ್ರಿಪ್‌ನಲ್ಲಿ ಏಪ್ರಿಲ್ 24 ರಂದು ಶ್ರೀನಗರದಿಂದ ದೆಹಲಿಗೆ ಒಂದು ಗಂಟೆ 15 ನಿಮಿಷಗಳ ಸ್ಪೈಸ್ ಜೆಟ್ ವಿಮಾನದ ಟಿಕೆಟ್‌ಗಳು ಪ್ರಸ್ತುತ 28,800 ರೂ.ಗೆ ಮಾರಾಟವಾಗುತ್ತಿವೆ. ಮೇ 5 ರಂದು ಅದೇ ಸ್ಪೈಸ್ ಜೆಟ್ ವಿಮಾನದ ಟಿಕೆಟ್ ದರ ಕೇವಲ 14,600 ರೂ. ಇತ್ತು. ದುರಂತದ ನಂತರ ಕಾಶ್ಮೀರದಿ...