ಭಾರತ, ಏಪ್ರಿಲ್ 25 -- ಪಹಲ್ಗಾಮ್ ದಾಳಿಗೆ ಪ್ರತೀಕಾರ?; ಜಮ್ಮು - ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರ ದಾಳಿಯಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರರ ಶೋಧ ನಡೆಸುತ್ತಿರುವ ಭದ್ರತಾ ಪಡೆಗಳು ಅವರ ಮನೆಗಳ ಮೇಲೂ ದಾಳಿ ನಡೆಸಿವೆ. ಇದೇ ವೇಳೆ, ಭಯೋತ್ಪಾದಕ ಆಸಿಫ್ ಶೇಖ್ ಮನೆ ಸ್ಫೋಟವಾಗಿದ್ದು, ಮತ್ತೊಬ್ಬ ಭಯೋತ್ಪಾದಕನ ಮನೆ ನೆಲಸಮವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜಮ್ಮು - ಕಾಶ್ಮೀರದ ತ್ರಾಲ್‌ನ ಮೊಗಾಮಾ ಪ್ರದೇಶದಲ್ಲಿ ಶಂಕಿತ ಉಗ್ರ ಆಸಿಫ್‌ ಶೇಖ್ ಮನೆ ಇದೆ. ಭದ್ರತಾ ಪಡೆ ಸಿಬ್ಬಂದಿ ಉಗ್ರ ಆಸಿಫ್‌ಗಾಗಿ ತ್ರಾಲ್‌ ಹಾಗೂ ಮೊಗಾಮಾ ಪ್ರದೇಶದಲ್ಲೂ ಶೋಧ ನಡೆಸಿದ್ದರು. ಇದೇ ವೇಳೆ, ಆಸಿಫ್ ಶೇಖ್ ಮನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಬೆಂಕಿಯ ಕೆನ್ನಾಲಗೆ ಹೊರಚಾಚಿತ್ತು. ಆಸಿಫ್ ಶೇಖ್‌ ಪಹಲ್ಗಾಮ್ ಉಗ್ರದಾಳಿಯಲ್ಲಿ ಭಾಗಿಯಾಗಿದ್ದ ಎಂಬ ಬಗ್ಗೆ ಸುಳಿವು ಸಿಕ್ಕ ಬಳಿಕ ಭದ್ರತಾ ಪಡೆಗಳು ಶೋಧ ನಡೆಸಿದ್ದವು. ಆಸಿಫ್ ಶೇಖ್‌ ಸ್ಥಳೀಯವಾಗಿ ಲಷ್ಕರ್ ಏ ತೊಯ್ಬಾ ಸಂಘಟನೆಯ ಕಮಾಂಡರ್ ಎಂದು ಮೂಲಗಳು ತಿಳಿಸಿವೆ....