ಭಾರತ, ಮೇ 6 -- ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಮುಂದಿನ ಕೆಲವು ದಿನಗಳಲ್ಲಿ ಭಾರತ ತಮ್ಮ ದೇಶದ ವಿರುದ್ಧ ಮಿಲಿಟರಿ ದಾಳಿ ನಡೆಸಬಹುದು ಎಂಬ "ವಿಶ್ವಾಸಾರ್ಹ ಗುಪ್ತಚರ" ಮಾಹಿತಿ ಲಭಿಸಿದೆ ಎಂದು ಕಳೆದ ಬುಧವಾರ ಪಾಕಿಸ್ತಾನ ಹೇಳಿತ್ತು. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಹತ್ಯೆಯಾದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಸರಣಿ ಭದ್ರತಾ ಸಭೆಗಳನ್ನು ನಡೆಸಿದ್ದು, ಇದು ಪಾಕ್ ವಿರುದ್ಧ ಭಾರತ ಮಿಲಿಟರಿ ಕಾರ್ಯಾಚರಣೆ ನಡೆಸಬಹುದೆಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿತ್ತು.

ಪಹಲ್ಗಾಮ್ ದಾಳಿ ನಂತರ ಪಾಕ್ ಜತೆಗಿನ ಭಾರತದ ಸಂಬಂಧ ಹದಗೆಟ್ಟಿದೆ. ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಲೇಬೇಕು ಎಂದು ಭಾರತೀಯರು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಭಾರತ ಪಾಕಿಸ್ತಾನದ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ಅದು ಹೇಗಿರಲಿದೆ? ಇತಿಹಾಸ ಏನು ಹೇಳುತ್ತದೆ? ನೋಡೋಣ ಬನ್ನಿ

ಬುಧವಾರ ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್, ಭಾರತ "ಮುಂದಿನ 24 ರಿಂದ 36 ಗಂಟೆಗಳಲ್ಲಿ" ಪಾ...