ಭಾರತ, ಏಪ್ರಿಲ್ 22 -- ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ 26ಕ್ಕೂ ಹೆಚ್ಚು ಅಮಾಯಕ ನಾಗರಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬಂದೂಕುಧಾರಿಗಳು ಅಮಾಯಕರ ಮೇಲೆ ಕನಿಕರವೇ ಇಲ್ಲದಂತೆ ಗುಂಡಿನ ಮಳೆಗೈದಿದ್ದು, ಅಮಾಯಕ ಪ್ರವಾಸಿಗರು, ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಉಗ್ರ ಸಂಘಟನೆಯಾದ ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (TRF), ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆ ಹೊತ್ತುಕೊಂಡಿದೆ. ಅತ್ತ, ದಾಳಿಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರದ ಬಿಜೆಪಿ ನಾಯಕರು ಹೇಳಿದ್ದಾರೆ.

"85,000ಕ್ಕೂ ಹೆಚ್ಚು ನಿವಾಸ ಪರವಾನಗಿಗಳನ್ನು ಸ್ಥಳೀಯರಲ್ಲದ ಜನರಿಗೆ ನೀಡಲಾಗಿದೆ. ಇದು ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ. ಸ್ಥಳೀಯರಲ್ಲದವರು ಪ್ರವಾಸಿಗರ ಸೋಗಿನಲ್ಲಿ ಕಾಶ್ಮೀರಕ್ಕೆ ಆಗಮಿಸುತ್ತಾರೆ. ಇಲ್ಲಿ ನಿವಾಸಗಳನ್ನು ಪಡೆದು, ತಮ್ಮದೇ ಭೂಮಿ ಎಂಬಂತೆ ವರ್ತಿಸಲು ಪ್ರಾರಂಭಿಸುತ್ತಾರೆ" ಎಂದು ಸಾ...