ಭಾರತ, ಏಪ್ರಿಲ್ 23 -- ಸೈಫುಲ್ಲಾ ಖಾಲಿದ್‌ ಯಾರು: ಜಮ್ಮು- ಕಾಶ್ಮೀರದ ಪಹಲ್ಗಾಮ್‌ನ ಬೈಸರಾ ಕಣಿವೆ ಪ್ರದೇಶದಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ 25ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಈ ದಾಳಿಯ ಹೊಣೆಯನ್ನು ದ ರೆಸಿಸ್ಟನ್ಸ್ ಫ್ರಂಟ್‌ (ಟಿಆರ್‌ಎಫ್‌) ಹೊತ್ತುಕೊಂಡಿದೆ. ಇದು ಪಾಕಿಸ್ತಾನ ಮೂಲದ ಲಷ್ಕರ್ ಏ ತೊಯ್ಬಾ ಉಗ್ರ ಸಂಘಟನೆಯ ಅಧೀನ ಸಂಘಟನೆಯಾಗಿದ್ದು, ಹಿಜ್ಬುಲ್ ಮುಜಾಹಿದ್ದೀನ್‌ನಿಂದ ಪ್ರತ್ಯೇಕವಾದ ಉಗ್ರರ ಗುಂಪಾಗಿದ್ದು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದೆ. ಮೂಲಗಳ ಪ್ರಕಾರ ಈ ಟಿಆರ್‌ಎಫ್‌ ಉಗ್ರ ಸಂಘಟನೆಯ ಕಮಾಂಡರ್ ಸೈಫುಲ್ಲಾ ಖಾಲಿದ್ ಪಹಲ್ಗಾಮ್ ಉಗ್ರರ ದಾಳಿಯ ಸಂಚುಕೋರ. ಹೀಗಾಗಿ ಈತ ಹೆಸರು ಈಗ ಮುನ್ನೆಲೆಗೆ ಬಂದಿದೆ.

ಲಷ್ಕರ್ ಏ ತೊಯ್ಬಾದ ಉಪ ನಾಯಕ ಸೈಫುಲ್ಲಾ ಖಾಲಿದ್ ಜಾಗತಿಕವಾಗಿ ಸೈಫುಲ್ಲಾ ಕಸೂರಿ ಎಂದೂ ಗುರುತಿಸಿಕೊಂಡಿದ್ದಾನೆ. ಪಾಕಿಸ್ತಾನ ಸೇನೆ ಮತ್ತು ಸರ್ಕಾರದ ಆಶ್ರಯದಲ್ಲಿರುವ ಉಗ್ರ ಹಫೀಜ್ ಸಯೀದ್ ಜತೆಗೆ ಈತ ನಿಕಟ ನಂಟು ಹೊಂದಿದ್ದಾನೆ. ಭಾರತದಲ್ಲಿ ನಡೆದಿರುವ ದೊಡ್ಡ ದೊಡ್ಡ ಭಯೋತ್ಪಾದಕ ಕೃತ್ಯಗಳ ಹಿ...