ಭಾರತ, ಏಪ್ರಿಲ್ 23 -- ಪಹಲ್‌ಗಾಮ್‌ ಉಗ್ರದಾಳಿ: ದಕ್ಷಿಣ ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭದ್ರತಾ ಪಡೆಗಳನ್ನು ಗುಪ್ತಚರ ಸಂಸ್ಥೆಗಳು ಎಚ್ಚರಿಸಿದ್ದವು ಎಂಬ ಅಂಶ ಪಹಲ್‌ಗಾಮ್ ದಾಳಿಯ ಬಳಿಕ ಬಹಿರಂಗವಾಗಿದೆ. ಅನಂತ್‌ನಾಗ್ ಜಿಲ್ಲೆಯ ಪಹಲ್‌ಗಾಮ್‌ ಸಮೀಪದ ಸುಂದರವಾದ ಹುಲ್ಲುಗಾವಲಾಗಿರುವ ಬೈಸಾರನ್‌ನಲ್ಲಿ ಉಗ್ರರು ದಾಳಿ ನಡೆಸಿದ್ದು ಅದರಲ್ಲಿ ಕನಿಷ್ಠ 28 ಜನ ಬಲಿಯಾದರು. ಹಲವರು ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ವಿದೇಶಿಯರು ಮತ್ತು ಇಬ್ಬರು ಸ್ಥಳೀಯ ನಿವಾಸಿಗಳೂ ಸೇರಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದರು ಎಂದು ಮಾತೃಭೂಮಿ ವರದಿ ಮಾಡಿದೆ.

ಜಮ್ಮು-ಕಾಶ್ಮೀರದ ಪ್ರವಾಸಿ ಹಾಟ್‌ಸ್ಪಾಟ್‌ಗಳ ಮೇಲೆ ಸಂಭಾವ್ಯ ಉಗ್ರ ದಾಳಿಯ ಸುಳಿವನ್ನು ಗುಪ್ತಚರ ಸಂಸ್ಥೆಗಳು ನೀಡಿದ್ದವು. ದಾಳಿಕೋರರು ತಮ್ಮ ಧಾರ್ಮಿಕ ಗುರುತಿನ ಆಧಾರದ ಮೇಲೆ ಕಾಶ್ಮೀರಿಗಳಲ್ಲದವರನ್ನು ಗುರಿಯಾಗಿಸಲು ಉದ್ದೇಶಿಸಿದ್ದಾರೆ ಎಂಬ ಅಂಶದ ಕಡೆಗೂ ಭದ್ರತಾ ಪಡೆಗಳ ಗಮನವನ್ನು ಗುಪ್ತಚರ ಸಂಸ್ಥೆ ನೀಡಿತ್ತು....