ಭಾರತ, ಏಪ್ರಿಲ್ 22 -- ಗೋಪಾಲಕೃಷ್ಣ ಕುಂಟಿನಿ ಬರಹ: ತಿಂಗಳ ಹಿಂದಷ್ಟೇ ನಾವು ಜಮ್ಮುಕಾಶ್ಮೀರ ಸುತ್ತಾಡಿ ಬಂದಿದ್ದೆವು. ಕೇಂದ್ರ ಸರಕಾರ ಆರ್ಟಿಕಲ್ 370 ಕಿತ್ತಾಕಿದ ಬಳಿಕ ಕಾಶ್ಮೀರದ ಮಂದಿ ನಿಜಕ್ಕೂ ಉಸಿರಾಡಲು ತೊಡಗಿದ್ದರು. ದಿನವೊಂದಕ್ಕೆ 65 ಸಾವಿರ ಮಂದಿ ಪ್ರವಾಸಿಗರು ಕಾಶ್ಮೀರಕ್ಕೆ ಬರುತ್ತಿದ್ದರು. ಅವರಿಂದಾಗಿಯೇ ಕಾಶ್ಮೀರದ ಮಂದಿ ಉಣ್ಣುವುದಕ್ಕೆ ಉಡುವುದಕ್ಕೆ ಬದುಕುವುದಕ್ಕೆ ದಾರಿಯಾಗಿತ್ತು.ಇಡೀ ಕಾಶ್ಮೀರದ ಚೆಲುವಿನ ಚಿತ್ತಾರ ಇರುವುದೇ ಪ್ರವಾಸೋದ್ಯಮದಲ್ಲಿ ಎಂದು ನಮಗೆ ಅನಿಸಿತ್ತು. ತೋಟಗಾರಿಕೆ ಬೆಳೆಗಿಂತಲೂ ಪ್ರವಾಸಿಗರಿಂದಾಗಿ ಕಾಶ್ಮೀರ ಚಿಗುರತೊಡಗಿತ್ತು.

ಶ್ರೀನಗರದಲ್ಲಿ ನಾವು ವಸತಿ ಹೂಡಿದ್ದ ಹೋಟೇಲ್ ನ ಮೆನೇಜರ್ , 'ಹೀಗೇ ಮುಂದುವರಿದರೆ, ನಮ್ಮ ಕಾಶ್ಮೀರ ದುಬೈಯನ್ನು ಹಿಂದಿಕ್ಕಲಿದೆ,ನೋಡ್ತಾ ಇರಿ' ಎಂದು ಸಂತಸದಿಂದ ಹೇಳಿಕೊಂಡಿದ್ದ.

ಇಂದು ಪಹಲ್ಗಾಮ್‌ ನಲ್ಲಿ ರಕ್ಕಸ ದಾಳಿಯಾಗಿದೆ. ನಮ್ಮಂತೆ ಬಂದ ಪ್ರವಾಸಿಗರನ್ನು ಹುಡುಕಿ ಹುಡುಕಿ ಕೊಲ್ಲಲಾಗಿದೆ.

ಪಹಲ್ಗಾಮ್‌ ದಕ್ಷಿಣ ಕಾಶ್ಮೀರ ಭಾಗದಲ್ಲಿದೆ. ಅನಂತನಾಗ್ ಜಿಲ್ಲ...