ಭಾರತ, ಏಪ್ರಿಲ್ 24 -- ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಮಧುಬನಿಯಲ್ಲಿ ಗುರುವಾರ (ಏ 24) ಮಾಡಿದ ಭಾಷಣದಲ್ಲಿ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ಪಹಲ್ಗಾಮ್‌ ಪ್ರದೇಶದಲ್ಲಿ ನಡೆದ ಉಗ್ರರ ದಾಳಿಯ ಕುರಿತು ಪ್ರಸ್ತಾಪಿಸಿದರು. ಭಾರತ ಸರ್ಕಾರದ ಚುಕ್ಕಾಣಿ ಹಿಡಿದಿರುವ, ದೇಶದಲ್ಲಿ ಅತ್ಯಂತ ಪ್ರಭಾವಿಯಾಗಿರುವ ವ್ಯಕ್ತಿಯ ಮೊದಲ ಸಾರ್ವಜನಿಕ ಪ್ರತಿಕ್ರಿಯೆ ಇದು ಎನ್ನುವ ಕಾರಣಕ್ಕೆ ಇಡೀ ಜಗತ್ತು ಈ ಭಾಷಣವನ್ನು ಕಾತರದಿಂದ ಗಮನಿಸಿತು. ಚುನಾವಣೆ ಹೊಸಿಲಿನಲ್ಲಿರುವ ಬಿಹಾರದಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರೀಕ್ಷೆಯಂತೆಯೇ ಮಾತನಾಡಿದ ಮೋದಿ, ನಂತರ ಭಯೋತ್ಪಾದನೆಯ ಕುರಿತು ಪ್ರಸ್ತಾಪಿಸಿದರು. ಸಾಮಾನ್ಯವಾಗಿ ತಮ್ಮ ಭಾಷಣಗಳಲ್ಲಿ ಇಂಗ್ಲಿಷ್‌ ಬಳಸದ ಅವರು ಈ ಬಾರಿ ನಿರ್ದಿಷ್ಟ ಕೊಡುವ ವಾಕ್ಯಗಳನ್ನು ಇಂಗ್ಲಿಷಿನಲ್ಲಿಯೇ ಆಡುವ ಮೂಲಕ ಇಡೀ ಜಗತ್ತಿಗೆ ಭಾರತ ಸರ್ಕಾರದ ನಿಲುವು ಹೀಗಿದೆ ಎಂದು ಸ್ಪಷ್ಟಪಡಿಸಿದರು.

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಸೆಪ್ಟೆಂಬರ್ 11, 2001 ರಂದು (9/11) ಭಯೋತ್ಪಾದಕ...