ಭಾರತ, ಏಪ್ರಿಲ್ 24 -- ಪಹಲ್ಗಾಮ್‌ ದಾಳಿ ಎಫ್‌ಐಆರ್‌: ಜಮ್ಮು-ಕಾಶ್ಮೀರದ ಪಹಲ್ಗಾಮ್‌ ಬೈಸಾರನ್‌ ಕಣಿವೆಯಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಗೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ಹಲವು ಕಳವಳಕಾರಿ ಸಂಗತಿಗಳು ಒಳಗೊಂಡಿವೆ. ಈ ಉಗ್ರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿ 26 ಜನ ಮೃತಪಟ್ಟಿದ್ದಾರೆ. ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಎಂಬ ಉಗ್ರ ಸಂಘಟನೆ ಈ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಈ ದಾಳಿ ಕುರಿತಂತೆ ಪಹಲ್ಗಾಮ್ ಪೊಲೀಸರು ಕೇಸ್ ದಾಖಲಿಸಿಕೊಂಡು ಎಫ್‌ಐಆರ್ ದಾಖಲಿಸಿದ್ದಾರೆ. ಅದರಲ್ಲಿ, ಟಿಆರ್‌ಎಫ್‌ ಉಗ್ರ ಕೃತ್ಯ ಮತ್ತು ಅದಕ್ಕೆ ಗಡಿಯಾಚೆಗಿನ ಭಯೋತ್ಪಾದಕಾ ಕುಮ್ಮಕ್ಕು ಸೇರಿ ಹಲವು ವಿಚಾರಗಳು ಎಫ್‌ಐಆರ್‌ನಲ್ಲಿ ಒಳಗೊಂಡಿವೆ.

1) ಪಹಲ್ಗಾಮ್ ದಾಳಿಯು ದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಎಂಬ ಉಗ್ರ ಸಂಘಟನೆ ಸದಸ್ಯರ ಪೂರ್ವ ಯೋಜಿತ ಕೃತ್ಯವಾಗಿದೆ.

2) ವಿಶ್ವಾಸಾರ್ಹ ಮೂಲಗಳ ಪ್ರಕಾರ, ಗಡಿಯಾಚೆಗಿನ (ಪಾಕಿಸ್ತಾನ) ತಮ್ಮ ಹ್ಯಾಂಡ್ಲರ್‌ಗಳು ಕೊಟ್ಟ ನಿರ್ದೇಶನಾನುಸಾರ ಈ ಉಗ್ರರು ಪಹಲ್ಗಾಮ್ ದಾಳಿ...