ಭಾರತ, ಏಪ್ರಿಲ್ 23 -- ಶಂಕಿತ ಉಗ್ರರ ರೇಖಾಚಿತ್ರ: ಜಮ್ಮು- ಕಾಶ್ಮೀರದ ಪಹಲ್ಗಾಮ್‌ ಉಗ್ರರ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಭದ್ರತಾ ಪಡೆ ಇಂದು (ಏಪ್ರಿಲ್ 23) ಬಿಡುಗಡೆ ಮಾಡಿತು. ಈ ದಾಳಿಯಲ್ಲಿ 28 ಪ್ರವಾಸಿಗರು ಹತರಾಗಿದ್ದಾರೆ. ಭದ್ರತಾ ಪಡೆ ಉಗ್ರರ ವಿರುದ್ಧ ಆಲ್‌ಔಟ್ ಕಾರ್ಯಾಚರಣೆಗೆ ಮುಂದಾಗಿದ್ದು, ಸರ್ಕಾರ ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆಯೇ ಶ್ರೀನಗರ ತಲುಪಿದ್ದು, ತುರ್ತು ಸರಣಿ ಸಭೆಗಳನ್ನು ನಡೆಸಿದ್ದಾರೆ. ಇಂದು ಪಹಲ್‌ಗಾಮ್‌ನ ಘಟನಾ ಸ್ಥಳಕ್ಕೂ ತೆರಳಿದ್ದಾರೆ.

ಪಹಲ್ಗಾಮ್ ಉಗ್ರರ ದಾಳಿ ಬೆನ್ನಿಗೆ ರಾಷ್ಟ್ರೀಯ ಭದ್ರತಾ ಪಡೆ ಮೂವರು ಶಂಕಿತ ಉಗ್ರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಶಂಕಿತ ಉಗ್ರರನ್ನು ಆಸಿಫ್ ಫುಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ. ಈ ಶಂಕಿತ ಉಗ್ರರು ದ ರೆಸಿಟ್ಟೆನ್ಸ್ ಫ್ರಂಟ್ (ಟಿಆರ್‌ಎಫ್‌) ಸದಸ್ಯರು. ಈ ಸಂಘಟನೆಯು ಪಾಕಿಸ್ತಾನ ಮೂಲದ ಲಷ್ಕರ್ ಏ ತೊಯ್ಬಾದ ಅಧ...