ಭಾರತ, ಏಪ್ರಿಲ್ 29 -- ಹಾಶಿಮ್ ಮೂಸಾ ಪಾಕ್ ಸೇನಾ ಕಮಾಂಡೋ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ತನಿಖೆ ಮುಂದುವರೆದಿದೆ. ಏತನ್ಮಧ್ಯೆ, ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರ ಪೈಕಿ ಒಬ್ಬಾತ ಪಾಕಿಸ್ತಾನ ಸೇನೆಯೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಸದ್ಯಕ್ಕೆ ಭಾರತೀಯ ಸೇನೆ ಅಥವಾ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಏಜೆನ್ಸಿಗಳು ಮೂವರು ಭಯೋತ್ಪಾದಕರನ್ನು ಗುರುತಿಸಿ ಅವರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದವು. ಈಗಾಗಲೇ ಭಾರತದ ಭದ್ರತಾ ಪಡೆಗಳು ಬಿಡುಗಡೆ ಮಾಡಿರುವ ಶಂಕಿತ ಉಗ್ರರ ರೇಖಾಚಿತ್ರದಲ್ಲಿರುವ ಹಾಶಿಮ್ ಮೂಸಾ ಎಂಬಾತ ಪಾಕಿಸ್ತಾನ ಸೇನಾ ಕಮಾಂಡೋ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಪಹಲ್ಗಾಮ್ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಪಾಕಿಸ್ತಾನಿ ಭಯೋತ್ಪಾದಕನನ್ನು ಹಾಶಿಮ್ ಮೂಸಾ ಎಂದು ಗುರುತಿಸಲಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಭಯೋತ್ಪಾದಕ ಸಂಚಿನ ತನಿಖೆಯಲ್ಲಿ ಮೂಸಾ ಪಾಕಿಸ್ತಾನ ಸೇನೆಯ ವಿಶೇಷ ಪಡೆಗಳ ಮಾಜಿ ಪ್ಯಾ...
Click here to read full article from source
To read the full article or to get the complete feed from this publication, please
Contact Us.