ಭಾರತ, ಜನವರಿ 28 -- ಜನಪದ ವಿದ್ವಾಂಸರಾದ ಮೀರಸಾಬಿಹಳ್ಳಿ ಶಿವಣ್ಣ ಅವರ 'ಪಶುಪಾಲಕ ವೀರರ ಕತೆಗಳು' ಕೃತಿ ಗಮನಸೆಳೆಯುವಂತಿದೆ. ನೂರು ಪುಟದ ಪುಟ್ಟ ಕೃತಿ, ಹಲವು ಕಾಲುದಾರಿಯ ವೀರ ಸಂತ ದೈವಗಳ ಸಾಂಸ್ಕೃತಿಕ ಲೋಕವನ್ನು ಪರಿಚಯಿಸುತ್ತಾ ಹೋಗುತ್ತದೆ. ಈ ಕೃತಿ ಮೂರು ಭಾಗಗಳಲ್ಲಿದೆ. ಮೊದಲ ಭಾಗದಲ್ಲಿ ಪುರಾಣ ಐತಿಹ್ಯಗಳು, ಈರಗಾರರ ಕತೆಗಳು, ಈರಗಾತಿಯರ ಕತೆಗಳು, ಈ ವರ್ಗೀಕರಣದ ಒಟ್ಟು ಕಥನಗಳು ಐತಿಹ್ಯಗಳೇ ಆಗಿವೆ. ಅಂತೆಯೇ ಇಲ್ಲಿನ ವೀರರ ಕಥನಗಳಲ್ಲಿ 'ಈರಗಾತಿ'ಯರೂ ಇದ್ದಾರೆ. ಹಾಗಾಗಿ ಇಂತಹ ವರ್ಗೀಕರಣದ ಚೌಕಟ್ಟನ್ನು ಈ ಕಥನಗಳು ಮೀರುತ್ತವೆ.
ಹಲವು ಸಮುದಾಯಗಳ ಉಲ್ಲೇಖವು ಈ ಕೃತಿಯಲ್ಲಿ ಬರುತ್ತದೆ. ಆಳುವ ಮತ್ತು ಕುಶಲಕರ್ಮಿ ಸಮುದಾಯಗಳ ಉಲ್ಲೇಖವಿದೆ. ಈ ಎಲ್ಲಾ ಸಮುದಾಯಗಳ ಉಲ್ಲೇಖವು 'ಗೊಲ್ಲಸಮುದಾಯ'ದ ಕಣ್ಣೋಟದಿಂದ ಚಿತ್ರಿತವಾಗಿದೆ. ರೆಡ್ಡಿ, ಶಾನುಭೋಗ, ಲಿಂಗಾಯತ, ಗೌಡ ಮುಂತಾದವರು ಮೇಲ್ ಸ್ಥರದ ಸಮುದಾಯಗಳಾದರೆ, ಉಪ್ಪಾರರು, ಕಂಚುಟಿಗರು, ಅಗಸರು, ಕುರುಬ, ಕಮ್ಮಾರ, ಕುಂಬಾರ, ಮಾದಿಗ, ಮುಸಲ್ಮಾನ ಮುಂತಾದ ಸಮುದಾಯಗಳು ಇರುವನ್ನು ಈ ಕಥ...
Click here to read full article from source
To read the full article or to get the complete feed from this publication, please
Contact Us.