Bangalore, ಫೆಬ್ರವರಿ 5 -- ಸಂತೋಷ್‌ ಕುಮಾರ್‌ ಎಲ್‌ಎಂ ಬರಹ: ಏಳೆಂಟು ವರ್ಷಗಳ ಹಿಂದೆ ಶಬರಿಮಲೆಗೆ ಹೋಗಿದ್ದಾಗ ವಾಪಸ್ ಬರುವ ಹಾದಿಯಲ್ಲಿ ತಮಿಳುನಾಡಿನ ಭವಾನಿಗೂ ಭೇಟಿ ಕೊಟ್ಟಿದ್ದೆವು. ಭವಾನಿಯಲ್ಲಿ ಸಂಗಮೇಶ್ವರರ್ ದೇವಸ್ಥಾನವಿದೆ. ಅದರ ಪಕ್ಕದಲ್ಲೇ ತ್ರಿವೇಣಿ ಸಂಗಮವಿದೆ. ಕಾವೇರಿ, ಭವಾನಿ ಮತ್ತು ಅಮೃತನದಿಗಳ ಸಂಗಮ. ಅಲ್ಲಿ ಸ್ನಾನ ಮಾಡುವುದೆಂದರೆ ಪಾಪವೆಲ್ಲ ಕಳೆದು ಪುಣ್ಯ ಬರುತ್ತದೆಂಬ ಪ್ರತೀತಿ. ಮೂರುನದಿಗಳ ಸಂಗಮವಾದ್ದರಿಂದ ಅಲ್ಲೇ ತರ್ಪಣ, ಜೊತೆಗೆ ಅನೇಕ ಆಚರಣೆಗಳು ನಡೆಯುತ್ತಿರುತ್ತವೆ.

ಅಲ್ಲಿ ಸ್ನಾನ ಮಾಡಲೆಂದೇ ಒಂದು ಕಡೆ ಜಾಗ ಗೊತ್ತು ಮಾಡಿ, ಜನರು ಅದನ್ನು ದಾಟಿ ಹೋಗದ ಹಾಗೆ ತಡೆಯನ್ನು ಹಾಕಿದ್ದರು. ಹೋಗಿದ್ದೇ ಬೇಸಗೆಯಾದ್ದರಿಂದ ಆ ಸೀಸನ್ನಿನಲ್ಲಿ ನೀರಿನ ಹರಿವು ಸಿಕ್ಕಾಪಟ್ಟೆ ಕಡಿಮೆ ಇತ್ತು. ಅಲ್ಲಿ ಹೋಗಿ ನೋಡಿದರೆ ವಾಂತಿ ಮಾಡುವುದೊಂದು ಬಾಕಿ. ಅಷ್ಟು ಗಲೀಜಿತ್ತು. ವಾಸನೆ ಬೇರೆ. ಸ್ನಾನ ಮಾಡಿದ ಜನರು ಅವರ ಒಳವಸ್ತ್ರಗಳನ್ನು ಬಿಟ್ಟು ಹೋಗಿದ್ದಾರೆ. ರಾಶಿ ರಾಶಿ ಅಲ್ಲೇ ತೇಲುತ್ತಿವೆ. ಯಾರೋ ಒಬ್ಬಾತ ಬಂದು ಅವುಗಳ...