ಭಾರತ, ಏಪ್ರಿಲ್ 17 -- ಪವಿತ್ರಾ ಲೋಕೇಶ್‌ ಮತ್ತು ನಟ ನರೇಶ್‌ ಸಂಬಂಧದ ಕುರಿತು ಮಾಧ್ಯಮಗಳು ವರ್ತಿಸುವ ರೀತಿಗೆ ರೇಣುಕಾ ಮಂಜುನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಬರಹ ವೈರಲ್‌ ಆಗಿದೆ. "ನಮ್ಮ ಕಿತ್ತೋದ ಮಾಧ್ಯಮಗಳು ಹೇಗಿವೆಯೆಂದರೆ.... ಈ ಪವಿತ್ರಾ ಲೋಕೇಶ್ ಎಂಬೋ ಸುಂದರ ನಟಿ ತೆಲಗು ಶ್ರೀಮಂತ ನಟನೊಬ್ಬನ ಹಿಂದೆ ಹೋಗಿದ್ದು , ತನ್ನ ಎರಡು ಪುಟ್ಟ ಮಕ್ಕಳನ್ನೂ ಗಮನಿಸದೆ ಮೊದಲ ಗಂಡನ ಸುಪರ್ದಿಗೆ ಬಿಟ್ಟು ಅವಕ್ಕೆ ತಾಯಿಮಡಿಲಿನ ಕಾವು ಅಪ್ಪುಗೆಗೇ ಕೊಡಲಿ‌ಪೆಟ್ಟು ಹೊರನಡೆದದ್ದು ಯಾರಿಗೆ ಗೊತ್ತಿಲ್ಲ! ಆಗಲೂ ಮಾಧ್ಯಮಗಳು ಅವರಿಬ್ಬರ ಹಿಂದೆಯೇ ಬಿದ್ದರು!! ನೊಂದ ಮೊದಲ ಗಂಡ ಸಭ್ಯ, ಮೌಲಿಕ ಚಿಂತಕ. ಆ ಮಕ್ಕಳನ್ನು ತನ್ನೊಟ್ಟಿಗೆ ಇಟ್ಟುಕೊಂಡು , ಮಾಧ್ಯಮಗಳು ಎಬ್ಬಿಸಿದ್ದ ಸುನಾಮಿಯಲ್ಲೂ ತನ್ನ ಮಕ್ಕಳು ತನ್ನ ಸಭ್ಯತೆ ಘನತೆಗೆ ಕುಂದಾಗದಂತೆ ನೋಡಿಕೊಂಡಿದ್ದು ಸಾರ್ವಜನಿಕರಿಗೆ ಗೊತ್ತಿರುವ ವಿಷಯ!

ಈಗ ವಿಷಯ ಏನೆಂದರೆ, ಈ ಕೊಳೆತ ಮಾಧ್ಯಮದವಕ್ಕೆ ಕಂಟೆಂಟ್ ಕೊರತೆ ಯಾವ ಮಟ್ಟದಲ್ಲಿದೆಯೆ...