ಭಾರತ, ಏಪ್ರಿಲ್ 10 -- ನಟ ಪವನ್ ಕಲ್ಯಾಣ್ ಹಾಗೂ ರೇಣು ದೇಸಾಯಿ ಮದುವೆ ಮತ್ತು ವಿಚ್ಛೇದನದ ಸುದ್ದಿ ಟಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿತ್ತು. ರೇಣು ದೇಸಾಯಿಯಿಂದ ದೂರವಾದ ಬಳಿಕ ಪವನ್ ವಿದೇಶಿ ಮೂಲದ ಮಹಿಳೆಯನ್ನು 3ನೇ ಮದುವೆ ಆಗುತ್ತಾರೆ. ಆದರೆ ರೇಣು ದೇಸಾಯಿ ಮಾತ್ರ ಒಂಟಿಯಾಗಿ ಉಳಿದು ಬಿಡುತ್ತಾರೆ. ಆದರೆ ಆಕೆ ಒಬ್ಬರೇ ಇರಲು ನಿರ್ಧಾರ ಮಾಡಿದ್ದು ಯಾಕೆ ಎಂಬುದು ಮಾತ್ರ ಇಲ್ಲಿವರೆಗೂ ಬಹಿರಂಗವಾಗಿರಲಿಲ್ಲ.

ಇತ್ತೀಚಿನ ಸಂದರ್ಶನವೊಂದರಲ್ಲಿ ರೇಣು ತಾವು ಮರುಮದುವೆ ಬಗ್ಗೆ ಯೋಚನೆ ಮಾಡದೇ ಇರಲು ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ. ತನ್ನ ಮಗಳ ಹಿತದೃಷ್ಟಿಯಿಂದ ತಾನು ಮರುಮದುವೆಯಾಗಿಲ್ಲ ಎಂದು ರೇಣು ಹೇಳಿಕೊಂಡಿದ್ದಾರೆ.

ರೇಣು ದೇಸಾಯಿ ಇತ್ತೀಚೆಗೆ ನಿಖಿಲ್ ವಿಜಯೇಂದ್ರ ಸಿಂಹ ಅವರೊಂದಿಗೆ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ಈ ಸಂದರ್ಭ, ತಾನು ಒಂಟಿಯಾಗಿ ಉಳಿಯಲು ನಿರ್ಧಾರ ಮಾಡಿರುವ ಹಿಂದಿನ ಕಾರಣ ಮತ್ತು 2018ರಲ್ಲಿ ತಮ್ಮ ನಿಶ್ಚಿತಾರ್ಥವನ್ನು ರದ್ದುಗೊಳಿಸಿದ್ದು ಏಕೆ ಎಂಬುದನ್ನು ವಿವರಿಸಿದ್ದಾರೆ. ಪವನ್ ಜೊತೆಗಿನ ಸಂ...