ಭಾರತ, ಫೆಬ್ರವರಿ 20 -- ಮಾರ್ಚ್ ತಿಂಗಳು ಆರಂಭವಾಯಿತೆಂದರೆ ಮಕ್ಕಳಿಗಿಂತಲೂ ತಂದೆ ತಾಯಿಗಳಿಗೆ ಹೆಚ್ಚಿನ ಭಯ ಶುರುವಾಗುತ್ತದೆ. ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ, ಉತ್ತಮ ಅಂಕಗಳನ್ನು ಗಳಿಸಲು ಕೆಲವು ವಾಸ್ತು ನಿಯಮಗಳನ್ನು ಕೂಡ ಪಾಲಿಸಬಹುದು. ಮಕ್ಕಳ ಲಗ್ನ ಮತ್ತು ರಾಶಿಗಳು ಯಾವುದೇ ಇದ್ದರೂ ಈ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮಕ್ಕಳು ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸುತ್ತಾರೆ.

ಸೂರ್ಯನು ಉದಯಿಸುವ ಮೊದಲು ಸ್ನಾನ ಮಾಡಿ, ಬೆಳಗಿನ ವೇಳೆ ಓದಲು ಆರಂಭಿಸಿದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಸುಮಾರು ಬೆಳಗಿನ ವೇಳೆ 6 ರಿಂದ 8 ರವರೆಗೆ ಸೂರ್ಯನು ಉದಯ ಲಗ್ನದಲ್ಲಿ ಇರುತ್ತಾನೆ. ಆದ್ದರಿಂದ ಈ ವೇಳೆಯಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಮನಸ್ಸಿನಲ್ಲಿ ಯಾವುದೇ ಯೋಚನೆ ಅಥವಾ ಆಸೆಗಳು ಇರುವುದಿಲ್ಲ. ಆದ್ದರಿಂದ ಕಠಿಣ ಎನಿಸುವ ಪಠ್ಯವನ್ನು ಈ ಅವದಿಯಲ್ಲಿ ವ್ಯಾಸಂಗ ಮಾಡುವುದು ಒಳ್ಳೆಯದು.

ಪೂರ್ವದಿಕ್ಕಿನ ಗೋಡೆಯ ಬಳಿ ಕುಳಿತು ವ್ಯಾಸಂಗ ಮಾಡಬಹುದು. ಆದರೆ ಗೋಡೆಗೆ ಒರಗಬಾರದು. ಪೂರ್ವದಿಕ್ಕಿನಲ್ಲಿ ಗುರು ದೇವರಿರುತ್ತಾ...