ಭಾರತ, ಫೆಬ್ರವರಿ 17 -- ಪರೀಕ್ಷೆ ಬಂತೆಂದರೆ ವಿದ್ಯಾರ್ಥಿಗಳು ಓದಿನಲ್ಲಿ ನಿರತರಾಗುತ್ತಾರೆ. ಪೂರ್ವ ಸಿದ್ಧತೆ ಸಮಯದಲ್ಲಿ ಬಹುತೇಕ ವಿದ್ಯಾರ್ಥಿಗಳು ಮಾಡುವ ತಪ್ಪೆಂದರೆ, ಬರವಣಿಗೆ ಕಡಿಮೆ ಮಾಡುವುದು. ಕೆಲವು ಮಕ್ಕಳಂತೂ ಓದುವ ಜೋಶ್‌ನಲ್ಲಿ ಬರೆಯುವದನ್ನೇ ನಿಲ್ಲಿಸಿರುತ್ತಾರೆ. ಈ ಅಭ್ಯಾಸವು ಪರೀಕ್ಷೆ ಬರೆಯುವಾಗ ಭಾರಿ ದೊಡ್ಡ ಹಿನ್ನಡೆಗೆ ಕಾರಣವಾಗಬಹುದು. ನಿರಂತರ ಬರೆಯುತ್ತಿದ್ದರೆ ಪೆನ್ನು ಹಿಡಿದ ಕೈ ಚೆನ್ನಾಗಿ ಓಡುತ್ತದೆ. ಹೀಗಾಗಿ ಪರೀಕ್ಷೆಗೂ ಮುನ್ನ ಬರವಣಿಗೆ ಸುಧಾರಿಸಲು, ವೇಗವಾಗಿ ಬರೆಯಲು ಅಭ್ಯಾಸ ಮಾಡಬೇಕು. ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಯುವುದು, ಬರೆದು ಕಲಿಯುವುದು ಹೀಗೆ ಕೆಲವು ಅಭ್ಯಾಸಗಳನ್ನು ಅಳವಡಿಸುವ ಮೂಲಕ ನಿಮ್ಮ ಬರವಣಿಗೆ ಸುಧಾರಿಸಬಹುದು.

ಪರೀಕ್ಷೆ ಬರೆಯಲು ನೀವು ಆಯ್ಕೆ ಮಾಡುವ ಪೆನ್‌ ತುಂಬಾ ಮುಖ್ಯ. ನಿಮಗೆ ಈ ಹಿಂದೆ ಯಾವ ಪೆನ್‌ನಲ್ಲಿ ಬರೆಯಲು ಸುಲಭವಾಯ್ತೋ, ಅದೇ ಪೆನ್‌ ಬಳಸಿ. ಪರೀಕ್ಷೆಗಾಗಿ ಹೊಸ ಕಂಪನಿಯ ಪೆನ್‌ ಹಿಡಿದರೆ, ನಿಮಗೆ ಆರಾಮದಾಯಕ ಅನಿಸದೇ ಇರಬಹುದು. ವೇಗವಾಗಿ ಬರೆಯಲು ಕಷ್ಟವಾಗಬಹುದು...