ಭಾರತ, ಫೆಬ್ರವರಿ 16 -- ಪರೀಕ್ಷೆಗಳು ಶಿಕ್ಷಣ ಪದ್ಧತಿಯ ಅವಿಭಾಜ್ಯ ಅಂಗ. ವರ್ಷವಿಡಿ ಕಲಿತಿದ್ದನ್ನು ಶಿಷ್ಯರಾದವರು ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದಾರೆನ್ನುವುದನ್ನು ಅರಿಯಲು ಪರೀಕ್ಷೆಯೊಂದು ಮಾಪನ. ಮಹಾಭಾರತ ಕಾಲದಲ್ಲಿ ಗುರು ದ್ರೋಣಾಚಾರ್ಯರು ತಮ್ಮ ವಿದ್ಯಾರ್ಥಿಗಳಿಗೆ ಕಾಲದಿಂದ ಕಾಲಕ್ಕೆ ಪರೀಕ್ಷೆ ನಡೆಸುತ್ತಿದ್ದ ಬಗ್ಗೆ ನಾವು ಓದುಕೊಂಡಿದ್ದೇವೆ ಅಲ್ಲವೇ! ಪರೀಕ್ಷೆಗಳು ವಿದ್ಯಾರ್ಥಿಯು ವಿಷಯವನ್ನು ತಿಳಿದುಕೊಂಡಿರುವ ಬಗ್ಗೆ, ಮತ್ತವರ ಕಾರ್ಯಶಕ್ತಿ, ಸಾಮಾನ್ಯ ಯೋಗ್ಯತೆ, ಮೇಧಾಶಕ್ತಿ, ಜ್ಞಾಪಕಶಕ್ತಿ, ಬುದ್ಧಿಯ ಪರಿಚಯವನ್ನು ಶಿಕ್ಷಕರಿಗೆ ಮಾಡುವಂತೆ, ವಿದ್ಯಾರ್ಥಿ ಮತ್ತವರ ಪಾಲಕರಿಗೆ ಪರಿಸ್ಥಿತಿಯ ಅರಿವು ಮೂಡಿಸಿ ಅದಕ್ಕೆ ತಕ್ಕಂತೆ ಅಧ್ಯಯನ ಮತ್ತು ತಯಾರಿಯ ಕುರಿತು ಮಾಹಿತಿ ನೀಡುತ್ತದೆ. ಹಾಗೆಯೇ ಶಿಕ್ಷಕರಿಗೆ ತಮ್ಮ ಬೋಧನಾ ಕ್ರಮದ ಬಗ್ಗೆ ಅವರ ಪರಿಸ್ಥಿತಿಯ ಬಗ್ಗೆ ತಿಳಿಸಿಕೊಡುತ್ತದೆ.

ಆದರೆ ಇಂದಿನ ವ್ಯವಸ್ಥೆಯಲ್ಲಿ ಪರೀಕ್ಷೆಗಳು ಶಿಕ್ಷಣದ ಉದ್ದೇಶವಾಗಿ, ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದು ಉನ್ನತ ಶಿಕ್ಷಣಕ್...