ಭಾರತ, ಫೆಬ್ರವರಿ 12 -- ಬೆಂಗಳೂರು: ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವಂತೆ ತಾಯಿ ಗದರಿಸಿದ್ದಕ್ಕೆ 15 ವರ್ಷದ ಬಾಲಕಿಯೊಬ್ಬಳು ಅಪಾರ್ಟ್ ಮೆಂಟ್ ನ 20ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಡುಗೋಡಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು 15 ವರ್ಷದ ಅವಂತಿಕಾ ಚೌರಾಸಿಯಾ ಎಂದು ಗುರುತಿಸಲಾಗಿದ್ದು, ವೈಟ್ ಫೀಲ್ಡ್ ನ ಖಾಸಗಿ ಶಾಲೆಯಲ್ಲಿ ಸಿಬಿಎಸ್ ಇ ಪಠ್ಯದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆಯ ತಂದೆ ಸಾಫ್ಟ್ ವೇರ್ ಇಂಜಿನಿಯರ್ ಉದ್ಯೋಗದಲ್ಲಿದ್ದಾರೆ.
ಅವಂತಿಕಾ ಪರೀಕ್ಷೆ ಫೆ.15ರಿಂದ ಆರಂಭವಾಗುತ್ತಿದ್ದು ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆಯದಂತೆ ತಾಯಿ ಬುದ್ದಿ ಹೇಳಿದ್ದಾರೆ. ನಂತರ ತಾಯಿ ಮನೆಯಲ್ಲಿ ಇರುವಾಗಲೇ ಅವಂತಿಕಾ 20ನೇ ಮಹಡಿಗೆ ಹೋಗಿ ಕೆಳಗೆ ಹಾರಿದ್ದಾಳೆ. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ದುರಂತ ಕಾಡುಗೋಡಿಯ ಅಸೆಟ್ಜ್ ಮಾರ್ಕ್ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಬುಧವಾರ ಬೆಳಗ್ಗೆ 11,.30ರ ವೇಳೆಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷೆ ಹತ್ತಿರ ಬ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.