ಬೆಂಗಳೂರು, ಮೇ 25 -- ಕೇಂದ್ರ ಲೋಕಸೇವಾ ಆಯೋಗ (UPSC)ವು 2025ರ ಜೂನ್ ತಿಂಗಳಿಂದ ನಡೆಸುವ ತನ್ನ ಎಲ್ಲಾ ಪರೀಕ್ಷೆಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಮೇಲ್ವಿಚಾರಣೆ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ನೇಮಕಾತಿ ಕಾರ್ಯವಿಧಾನಗಳಲ್ಲಿ ನಕಲಿ ಮತ್ತು ವಂಚನೆಯನ್ನು ತಡೆಯುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ಈ ಬೆಳವಣಿಗೆಯು 2025ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂದರೆ, ಈ ಬಾರಿ ಇಂದು (ಮೇ 25ರ ಭಾನುವಾರ) ಪರೀಕ್ಷೆ ನಡೆಯುತ್ತಿದ್ದು, 80 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆ ಇರುವುದಿಲ್ಲ.
ಪ್ರಸ್ತಾವಿತ ಪರಿಶೀಲನಾ ವ್ಯವಸ್ಥೆಯು ಫಿಂಗರ್ಪ್ರಿಂಟ್ ಗುರುತಿಸುವಿಕೆ, ಮುಖ ಗುರುತಿಸುವಿಕೆ ಮತ್ತು ಇ-ಪ್ರವೇಶ ಕಾರ್ಡ್ಗಳ QR ಕೋಡ್ ಸ್ಕ್ಯಾನಿಂಗ್ ಒಳಗೊಂಡಿರುತ್ತದೆ. ಪರೀಕ್ಷೆಗಳ ಸಮಯದಲ್ಲಿ ದುಷ್ಕೃತ್ಯಗಳನ್ನು ಗುರುತಿಸಲು ಮತ್ತು ತಡೆಯಲು ಲೈವ್ ಎಐ-ಸುಸಜ್ಜಿತ...
Click here to read full article from source
To read the full article or to get the complete feed from this publication, please
Contact Us.